ಅಯೋಧ್ಯೆ ವಿವಾದ ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಲು ಸುಪ್ರೀಂ ಸೂಚನೆ

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲರೂ ಸೇರಿ ನ್ಯಾಯಾಲಯದ ಹೊರಗೆ ಚರ್ಚಿಸಿ ಪರಿಹಾರ ಕಂಡುಕೊಂಡು ಬರಬೇಕು ಎಂದು ಹೇಳಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ವಿವಾದದ ಕುರಿತು ತುರ್ತು ವಿಚಾರಣೆಗೆ ಕೋರಿ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಎರಡೂ ವರ್ಗಗಳು ಕೂತು ಚರ್ಚೆ ನಡೆಸಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹೇಳಿದ್ದಾರೆ. ಇದು ತುಂಬಾ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯವಾಗಿದ್ದರಿಂದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಈ ವಿವಾದದ ಕುರಿತು ಎರಡೂ ವರ್ಗಗಳನ್ನು ಸಂಪರ್ಕಿಸಿ ಅವರ ತೀರ್ಮಾನವನ್ನು ಮಾರ್ಚ್ 31 ರೊಳಗೆ ತಿಳಿಸಬೇಕು ಎಂದು ಸುಬ್ರಮಣ್ಯಸ್ವಾಮಿಗೆ ಕೋರ್ಟ್ ಆದೇಶಿಸಿತು. ಒಂದು ವೇಳೆ ಚರ್ಚೆ ಸಫಲವಾಗದಿದ್ದರೆ ತಾವು ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದು ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹೇಳಿದರು.

Loading...

Leave a Reply

Your email address will not be published.

error: Content is protected !!