ಪಾನ್ - ಆಧಾರ್ ಲಿಂಕ್ ಕಡ್ಡಾಯ ಸರಿ ಎಂದ ಕೋರ್ಟ್, ಆದರೆ ಕೆಲವರಿಗೆ ವಿನಾಯಿತಿ |News Mirchi

ಪಾನ್ – ಆಧಾರ್ ಲಿಂಕ್ ಕಡ್ಡಾಯ ಸರಿ ಎಂದ ಕೋರ್ಟ್, ಆದರೆ ಕೆಲವರಿಗೆ ವಿನಾಯಿತಿ

ಐಟಿ ರಿಟರ್ನ್ ಗೆ ಆಧಾರ್ ಕಾರ್ಡ್ ಸಂಪರ್ಕವನ್ನು ಕಡ್ಡಾಯ ಮಾಡುವ ಕೇಂದ್ರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿದೆ. ಆದರೆ ಇಲ್ಲಿಯವರೆಗೂ ಆಧಾರ ಪಡೆಯದವರಿಗೆ ಮತ್ತು ಅದಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಆಧಾರ್ ಕಾರ್ಡ್ ಪಡೆಯುವವರೆಗೂ ವಿನಾಯಿತಿ ನೀಡಿ ಭಾಗಶಃ ತಡೆ ನೀಡಿದೆ.

ವೈಯುಕ್ತಿಕ ಮಾಹಿತಿ ಗೌಪ್ಯತೆ ವಿಷಯದ ಕುರಿತು ಸಂವಿಧಾನದ ಪೀಠ ತೀರ್ಮಾನ ಹೊರಬೀಳುವವರೆಗೂ ಈ ವಿನಾಯಿತಿ ಇರಲಿದೆ ಎಂದು ನ್ಯಾಯಾಲಯ ಹೇಳಿದೆ. ಇದುವರೆಗೂ ಆಧಾರ್ ಇಲ್ಲದವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಆದರೆ ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವವರು ಮಾತ್ರ ಪಾನ್ ಕಾರ್ಡ್ ಗೆ ಲಿಂಕ್ ಮಾಡಬೇಕಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ನೊಂದಿಗೆ ಲಿಂಕ್ ಪಾನ್ ಕಾರ್ಡ್ ಲಿಂಕ್ ಮಾಡುವುದು ಜುಲೈನಿಂದ ಕಡ್ಡಾಯ ಮಾಡಿ ಸರ್ಕಾರ ಆದಾಯ ತೆರಿಗೆ ಕಾಯ್ದೆ 139ಎಎ ಅನ್ನು ತಂದಿತ್ತು. ಇದನ್ನು ಪ್ರಶ್ನಿಸಿ ಸಿಪಿಐ ಮುಖಂಡ ಬಿನಯ್ ವಿಶ್ವಂ ಮುಂತಾದವರು ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ವಿಚಾರಣೆ ನಡೆಸಿದೆ ಜಸ್ಟೀಸ್ ಎಕೆ ಸಿಕ್ರಿ, ಜಸ್ಟೀಸ್ ಅಶೋಕ್ ಭೂಷಣ್ ರವರ ನ್ಯಾಯಪೀಠ, ಕೇಂದ್ರ ಸರ್ಕಾರದ ಹೊಸ ನಿಯಮ ಮತ್ತು ಆಧಾರ್ ಕಾಯ್ದೆ ನಡುವೆ ಯಾವುದೇ ಘರ್ಷಣೆಯಿಲ್ಲ ಎಂದು ಹೇಳಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದ ಅನುಚ್ಛೇದ 21 ರ ಕುರಿತು ಸಂವಿಧಾನ ಪೀಠದ ತೀರ್ಪು ಹೊರಬೀಳುವವರೆಗೂ ಆಧಾರ್ ಲಿಂಕ್ ಮಾಡದ ಪಾನ್ ಕಾರ್ಡ್ ಗಳು ಹಾಗೂ ಈ ಹಿಂದೆ ನಡೆಸಿದ ವ್ಯವಹಾರಗಳೂ ಸಕ್ರಮವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.

Loading...
loading...
error: Content is protected !!