ಎಲ್ಲಾ ಜಯಲಲಿತಾ ವೇದನಿಲಯಂನ ಆ "ರಹಸ್ಯ ಕೋಣೆ"ಗಾಗಿ? |News Mirchi

ಎಲ್ಲಾ ಜಯಲಲಿತಾ ವೇದನಿಲಯಂನ ಆ “ರಹಸ್ಯ ಕೋಣೆ”ಗಾಗಿ?

ಚೆನ್ನೈನಲ್ಲಿನ ಪೋಯೆಸ್ ಗಾರ್ಡನ್ ನಲ್ಲಿರುವ ವೇದ ನಿಲಯಂ ಕುರಿತು ತಮಿಳುನಾಡಿನಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಕುತೂಹಲ ಮೂಡಿಸಿದೆ. ದಿವಂಗತ ಜಯಲಲಿತ ಜೀವಿಸಿದ್ದ ಪೋಯೆಸ್ ಗಾರ್ಡನ್ ನಲ್ಲಿನ ವೇದ ನಿಲಯಂ ನಮಗೆ ಸೇರಿದ್ದು ಎಂದು ಜಯಾ ಆಪ್ತೆ ಶಶಿಕಲಾ, ಸೋದರಸೊಸೆ ದೀಪಾ ಜಯಕುಮಾರ್, ಅಣ್ಣಾಡಿಎಂಕೆ ಪಕ್ಷ ಮತ್ತಿತರರು ಹಕ್ಕು ಮಂಡಿಸುತ್ತಿದ್ದಾರೆ. ಮತ್ತೊಂದು ಕಡೆ ಇದನ್ನು ಜಯಾ ಸ್ಮಾರಕ ನಿವಾಸವನ್ನಾಗಿ ಮಾಡಲು ತಮಿಳುನಾಡು ಸರ್ಕಾರ ಪ್ರಯತ್ನಿಸುತ್ತಿದೆ.

ಇವರೆಲ್ಲಾ ಜಯಲಲಿತಾ ಮೇಲಿರುವ ಪ್ರೀತಿಯಿಂದ ವೇದ ನಿಲಯಂ ಬೇಕೆಂದು ಕೇಳುತ್ತಿಲ್ಲ. ಬದಲಾಗಿ ಅದರಲ್ಲಿರುವ ಒಂದು ಗುಪ್ತ ಕೊಠಡಿಗಾಗಿ ಮಾತ್ರ ಅವರು ಹೊಡೆದಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಜಯಲಲಿತಾ ಸಂಪಾದಿಸಿದ ಆಸ್ತಿಯನ್ನೆಲ್ಲಾ ವೇದ ನಿಲಯಂ ನ ಆ ರಹಸ್ಯ ಕೋಣೆಯಲ್ಲಿಯೇ ಬಚ್ಚಿಟ್ಟಿದ್ದು, ಅದನ್ನು ತೆಗೆಯುವುದು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಕೋಣೆ ತೆರೆಯಲು ಬಯೋಮೆಟ್ರಿಕ್ ಕೀ ಜಯಲಲಿತಾ ಅವರ ಬಳಿಯಿದ್ದು, ಜಯಲಲಿತಾ ಅವರ ಕಾಲಿನ ಹೆಜ್ಜೆ ಗುರುತಿನಿಂದಲೇ ಆ ರಹಸ್ಯ ಕೋಣೆ ತೆರೆಯಲು ಸಾಧ್ಯ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದ್ದರಿಂದಲೇ ಆಕೆಯ ಅಂತ್ಯಕ್ರಿಯೆ ಸಮಯದಲ್ಲಿ ಆಕೆಯ ಮೃತದೇಹವನ್ನು ಹತ್ತಿರದಿಂದ ನೋಡಿದವರು ಕಾಲುಗಳು ಕಾಣಿಸದಿದ್ದುದು ಗಮನಿಸಿದರು ಎನ್ನಲಾಗುತ್ತಿದೆ. ಈ ಕುರಿತು ಆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ವರದಿಯೂ ಆಗಿತ್ತು ಎನ್ನುತ್ತಿದ್ದಾರೆ. ವ್ಯಾದಿಯ ಕಾರಣದಿಂದ ಕಾಲು ತೆಗೆಯಬೇಕಾಯಿತು ಎಂದು ವೈದ್ಯರು ಸ್ಪಷ್ಟನೆ ನಿಡಿದ್ದರೂ, ಸೀಕ್ರೆಟ್ ರೂಮ್, ಬಯೋಮೆಟ್ರಿಕ್ ಕೀಲಿಕೈ ನಂತಹ ಅನುಮಾನಗಳು ಮಾತ್ರ ಇನ್ನೂ ಉಸಿರಾಡುತ್ತಿವೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿ, ಜೈಲು ಶಿಕ್ಷೆ ವಿಧಿಸಿದ ದಿನದ ರಾತ್ರಿ ಶಶಿಕಲಾ ವೇದ ನಿಲಯಂ ನಲ್ಲಿಯೇ ಕಳೆದರು. ಇದೂ ಕೂಡಾ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಮಿಳರು ಹೇಳುತ್ತಿದ್ದಾರೆ. ಅಸಲಿಗೆ ಸೀಕ್ರೆಟ್ ಕೋಣೆಯಲ್ಲಿ ಆಸ್ತಿಯಿದೆಯಾ? ಅದನ್ನು ಈಗಾಗಲೇ ಸಾಗಿಸಿದ್ದಾರಾ? ಎಂಬ ಅನುಮಾನುಗಳೂ ಕೇಳಿಬರುತ್ತಿವೆ.

ಈ ಸೀಕ್ರೆಟ್ ರೂಮ್ ನಿಜವೇ? ಅಥವಾ ಕಲ್ಪನೆಯೇ? ಎಂಬುದರ ಕುರಿತು ಹಲವರು ವಿವರಣೆ ನೀಡುವುದು ಹೀಗೆ… ಕೊಡನಾಡು ಎಸ್ಟೇಟ್ ನಲ್ಲಿ ಆಸ್ತಿಗಳಿಗಾಗಿಯೇ ಕಳ್ಳತನ ನಡೆದಿದೆ. ಅದರಲ್ಲಿಯೇ ಬೆಲೆ ಬಾಳು ಸ್ವತ್ತು ಇದ್ದಾಗ, ಇನ್ನು ಜಯಾ ಅಧಿಕೃತ ನಿವಾಸದಲ್ಲಿ ಇರುವುದಿಲ್ಲವಾ ಎಂದು ಮರುಪ್ರಶ್ನೆ ಹಾಕುತ್ತಿದ್ದಾರೆ.

Loading...
loading...
error: Content is protected !!