ಸೆಹ್ವಾಗ್ ಟ್ವೀಟ್ ನೋಡಿ ನನಗೆ ತುಂಬಾ ಬೇಸರವಾಯಿತು

ಕಾರ್ಗಿಲ್ ಹುತಾತ್ಮ ಯೋಧ ಕ್ಯಾಪ್ಟನ್ ಮನ್ದೀಪ್ ಸಿಂಗ್ ಪುತ್ರಿ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಆರೋಪ, ಪ್ರತ್ಯಾರೋಪಗಳಿಂದ ಪ್ರತಿ ದಿನ ಸುದ್ದಿಯಲ್ಲಿದ್ದಾಳೆ. ಎಬಿವಿಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಸಾಮಾಜಿಕತ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದಾಳೆ. ಇದೀಗ ಟೀಮ್ ಇಂಡಿಯಾ ಮಾಜಿ ಓಪೆನರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಕುರಿತು ಈಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ತನ್ನನ್ನು ಉದ್ದೇಶಿಸಿ ಸೆಹ್ವಾಗ್ ಮಾಡಿದ ಟ್ವೀಟ್ ನೋಡಿ ತುಂಬಾ ಬೇಸರವಾಯಿತು ಎಂದು ಗುರ್ಮೆಹರ್ ಹೇಳಿದ್ದಾಳೆ. ತನ್ನ ಸಣ್ಣ ವಯಸ್ಸಿನಿಂದ ಸೆಹ್ವಾಗ್ ರನ್ನು ನೋಡುತ್ತಿದ್ದೇನೆ, ತನ್ನ ಕುರಿತು ಏಕೆ ಅವರು ಹಾಗೆ ಟ್ವೀಟ್ ಮಾಡಿದರು ಎಂದು ಪ್ರಶ್ನಿಸಿದ್ದಾಳೆ.

ಗುರ್ಮೆಹರ್ ತಂದೆ ಕ್ಯಾಪ್ಟರ್ ಮನ್ದೀಪ್ ಸಿಂಗ್ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಗುರ್ಮೆಹರ್ ಇತ್ತೀಚೆಗೆ “ತನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ ತನ್ನ ತಂದೆಯನ್ನು ಕೊಂದಿದ್ದು” ಎಂದು ಬರೆದ ಪ್ಲಕಾರ್ಡ್ ಹಿಡಿದಿರುವ ಫೋಟೋ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಳು. ಗುರ್ಮೆಹರ್ ಹೇಳಿಕೆಗೆ ಉತ್ತರವಾಗಿ ವೀರೇಂದ್ರ ಸೆಹವಾಗ್ ಅದೇ ರೀತಿಯಲ್ಲಿ ಟ್ವೀಟ್ ಮಾಡಿದ್ದರು. “ನಾನು ಎರಡು ತ್ರಿಶತಕಗಳನ್ನು ಮಾಡಲಿಲ್ಲ, ನನ್ನ ಬ್ಯಾಟ್ ಮಾಡಿದೆ” ಎಂದು ವೀರೇಂದ್ರ ಸೆಹವಾಗ್ ಟ್ವೀಟ್ ಮಾಡಿದ್ದರು. ಸೆಹವಾಗಿ ಈ ಟ್ವೀಟ್ ಮಾಡುತ್ತಿದ್ದಂತೆ ಹಲವರು ಸೆಹವಾಗ್ ಅವರ ಮಾತನ್ನು ಬೆಂಬಲಿಸಿದರು. ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ನಡೆಸಿದ್ದ ದಾಳಿಯನ್ನು ಖಂಡಿಸಿ ಗುರ್ಮೆಹರ್ ಸಾಮಾಜಿತ ತಾಣದಲ್ಲಿ ಮಾಡಿದ ಪೋಸ್ಟ್ ವೈರಲ್ ಆಗಿತ್ತು. ಆ ನಂತರ ಗುರ್ಮೆಹರ್ ಸಾಮಾಜಿತ ತಾಣದಲ್ಲಿ ಪ್ರತಿನಿತ್ಯ ಪೋಸ್ಟ್ ಮಾಡುತ್ತಿದ್ದಾಳೆ. ತನ್ನನ್ನು ರೇಪ್ ಮಾಡುತ್ತೇವೆ ಎಂದು ಎಬಿವಿಪಿ ಕಾರ್ಯಕರ್ತರು ಹೆದರಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.

Loading...

Leave a Reply

Your email address will not be published.

error: Content is protected !!