ಸೆಲ್ಫಿ ಸ್ವಾರಸ್ಯ – ಮಧುಚಂದ್ರ

‘ಸ್ವಂತಿ’ ಈ ಪದ ಕಿವಿಯ ಮೇಲೆ ಬಿದ್ದೊಡನೆಯ ಹಲವರು ಇದೇನಿದು ಹೊಸ ಪದ ಇಲ್ಲಿಯವರೆಗೆ ನಾವೆಲ್ಲಿಯೂ ಕೇಳಿಲ್ಲವಲ್ಲ ಎಂದು ಅಸಡ್ಡೆ ತೋರಬಹುದು ಇಲ್ಲವೇ ಪದವನ್ನು ಒಂದು ಕಿವಿಯಿಂದ ಕೇಳಿ  ಇನ್ನೊಂದು  ಕಿವಿಯ ಮೂಲಕ ಬಿಟ್ಟುಬಿಡಬಹುದು. ಇನ್ನೂ ‘ ಸೇಲ್ಫಿ ‘ ಪದಕ್ಕೆ ಬರೋಣ ಈ ಪದ ಕೇಳಿದೊಡನೆಯೇ ಹಾಲುಗೆನ್ನೆಯ ಕಂದಮ್ಮನಿಂದ ಹಿಡಿದು ಇಳಿವಯಸ್ಸಿನ ವಯೋರುದ್ದರವರೆಗೂ ಕೇಳದಿರುವ ವಂಶವೃಕ್ಷವೇ ಇಲ್ಲವೆನ್ನಬಹುದು. ಇಂದು ಆಂಗ್ಲ ಭಾಷೆಯ ‘ಸೆಲ್ಫಿಯೇ’ ನಮ್ಮ ಕನ್ನಡದ ‘ಸ್ವಂತಿ’.

ಮಾನವನು ತನ್ನ ಭಾವಚಿತ್ರವನ್ನು ಶತಮಾನಗಳ ಹಿಂದೆಯೇ ತಾನೇ ರಚಿಸುತ್ತಿದ್ದ  ಹಾಗಾಗಿ ಸೇಲ್ಫಿ ಪದವು ನೆನ್ನೆ ಮೊನ್ನೆಯದಲ್ಲ ಹಲವಾರು ಶತಮಾನಗಳ ಹಿಂದೆಯೇ ಸೇಲ್ಫಿಯನ್ನು ಕಂಡುಹಿಡಿದಿದ್ದರು. ೨೦೦೨ರಲ್ಲಿ ಆಸ್ಟ್ರೇಲಿಯ ದೇಶದಲ್ಲಿ ಸೇಲ್ಫಿ ಪದವು ಮೊದಲ ಬಾರಿಗೆ ಪ್ರಚಲಿತಕ್ಕೆ ಬಂತು ಅಂದಿನಿಂದ ಇಂದಿನವರೆಗೂ ನಡೆದದ್ದು ಇತಿಹಾಸ .

೨೦೧೩ರಲ್ಲಿ ಆಕ್ಸ್ ಫೋರ್ಡ್ ನಿಘಂಟು ಈ ಪದವನ್ನು ವರ್ಷದ ಪದವೆಂದು ಗೌರವಿಸಿ ಮಾನ್ಯ ಮಾಡಿತು.

ಸೇಲ್ಫಿಯೆಂದರೆ ನಮ್ಮ ಫೋಟೋವನ್ನು ಬೇರೆಯವರ ಸಹಾಯವಿಲ್ಲದೆ ನಾವೇ ತಗೆಯುವುದು ಎಂಬರ್ಥ. ಹಾಗಾಗಿ ಇಂದು ಬೇರೆಯವರು ತಗೆಯುವ ಚಿತ್ರಗಳಿಗಿಂತ ತಮ್ಮ ಸೇಲ್ಫಿ ತೆಗೆಯಲು ಜನರು ತಾವೇ ಮುಗಿಬೀಳುತ್ತಲೇ ಇದ್ದಾರೆ. ತಾವೇನು ಮಾಡುತ್ತಿದ್ದೇವೆ ಹಾಗೂ ಕೇವಲ ಸಂತೋಷಕ್ಕಾಗಿ ಜನರು ಸೇಲ್ಫಿ ತಗೆಯುವುದೇ ಹಿಂದಿನ ಮುಖ್ಯ ಉದ್ದೇಶ.

ಈ ಉದ್ದೇಶ ಯಾಕೋ ಕೆಲವೊಮ್ಮೆ ಸರಿಯಾದ ದಾರಿಯಲ್ಲಿದ್ದರೆ, ಕೆಲವೊಮ್ಮೆ ಮಾನವೀಯತೆಯನ್ನು ಮರೆತು ದಾರಿತಪ್ಪಿದಂತೆ ಭಾಸವಾಗುತ್ತಿದೆ. ಕೆಲವರು ತಮ್ಮ ಸಂತೋಷದ ಕ್ಷಣವನ್ನು , ಕೆಲವರು ಅತಿ ದುಃಖದ ಕ್ಷಣಗಳನ್ನು, ಇನ್ನೂ ಕೆಲವರು ಅತ್ಯಂತ ಕರುಣಾಜನಕ ಕ್ಷಣಗಳನ್ನು ಸೇಲ್ಫಿಗಳ ಮೂಲಕ ಸಾಮೂಹಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದನ್ನು ನಾವು ಸ್ಮರಿಸಬಹುದು.

Selfieಸೇಲ್ಫಿಯಿಂದ ಸಂಸಾರಗಳನ್ನು ಹಾಗೂ ಮಿತ್ರರನ್ನು ಒಂದುಗೂಡಿಸಿರುವ ಸುದ್ದಿಯು ಸಹ ಇವೆ ಹಾಗು ಸಂಸಾರಗಳನ್ನು ಮತ್ತು ಮಿತ್ರರನ್ನು  ಒಡೆದ ನಿದರ್ಶನಗಳು ಹಲವಾರು ಇವೆ. ಸೇಲ್ಫಿ ತಗೆಯಲು ಹೋಗಿ ನಗೆಪಾಟಿಲಿಗೆ ಈಡಾಗಿದ್ದು ಇದೆ ಹಾಗೂ ಅತಿರೇಕಕ್ಕೆ ಹೋಗಿ ಯಮನ ಪ್ರಜೆಯಾಗಿದ್ದು ಇದೆ. ಸೇಲ್ಫಿಯಿಂದ ಕಳೆದು ಹೋದ ಕ್ಷಣಗಳನ್ನು ಪಡೆದದ್ದು ಇದೆ, ಕಳೆದುಕೊಂಡದ್ದು ಇದೆ.

ಇತ್ತೀಚೆಗೆ ಸಚಿವರೊಬ್ಬರು ಬರಪೀಡಿತ ಪ್ರದೇಶದಲ್ಲಿ ತಗೆದು ವಿವಾದ ಸೃಷ್ಟಿಸಿದ ಸೇಲ್ಫಿ , ದೇಶದ ಕ್ರಿಕೇಟಿಗನೋರ್ವ ನಿಯಮಾವಳಿಗಳನ್ನು ಗಾಳಿಗೆ ತೂರಿ ವಾಹನದಿಂದ ಇಳಿದು ಗಿರ್ ಅರಣ್ಯದಲ್ಲಿ ಸಿಂಹಗಳ ಹಿಂಡಿನ ಮುಂದೆ ತಗೆದು ವಿವಾದ ಸೃಷ್ಟಿಸಿದ ಸೇಲ್ಫಿ, ಕದ್ದ ಮೊಬೈಲ್ ಫೋನ್ನಿಂದ ಸೇಲ್ಫಿ ತಗೆದು ಬಂಧಿತನಾದ ಕಳ್ಳ, ಜಲಪಾತ ,ಬೆಟ್ಟ ಹಾಗೂ ಕಣಿವೆಯ ಸೌಂದರ್ಯದ ಮುಂದೆ  ಸೇಲ್ಫಿ ತಗೆಯಲು ಹೋಗಿ ಅಲ್ಲಿಯೇ ಯಮನ ಜೊತೆ ಲೀನನಾದವರು, ಪುರಾತನ ವಿಗ್ರಹದ ಜೊತೆ ಸೇಲ್ಫಿ ತಗೆಯಲು ಹೋಗಿ ಅದನ್ನೇ ಹಾಳುಗೆಡವಿ ಜೈಲು ಪಾಲಾದ ಯುವಕ, ಏಡಿಯ ಜೊತೆ ಸೇಲ್ಫಿ ತಗೆಯಲು ಹೋಗಿ ನಾಲಿಗೆಯನ್ನೇ ಕಳೆದುಕೊಂಡ ಯುವಕ, ವಾಹನ ಚಾಲನೆ ಮಾಡುವಾಗ ಸೇಲ್ಫಿ ತಗೆಯಲು ಹೋಗಿ ಜೀವನದ ಕಟ್ಟ ಕಡೆಯ ಚಿತ್ರಕ್ಕೆ ಹೊವಿನ ಹಾರ ಹಾಕಿಸಿ ಕೊಂಡವರ ಸೇಲ್ಫಿ, ತಂದೆಯ ಶವದ ಅಂತ್ಯಸಂಸ್ಕಾರದ ಸಮಯದಲ್ಲಿ ತಗೆದ ಸೇಲ್ಫಿ, ಪ್ರಚಾರಕ್ಕಾಗಿ ನಟಿಮಣಿಯೊಳು ಅರೆನಗ್ನವಾಗಿ ತಗೆದ ಸೇಲ್ಫಿ,ಇನ್ನೂ ಹಲವಾರು ಸಂದರ್ಭದಲ್ಲಿ ಸೇಲ್ಫಿ ತಗೆದು ದಾರಿ ತಪ್ಪಿದ ಇಂದಿನ ಉದಾಹರಣೆಗಳು.

ಹಾಗಾಗಿ ಸೇಲ್ಫಿ ಎಂದರೆ ಸೆಲ್ಫ್ ಫೈನ್ ಎಂದು ಅರ್ಥ ನೀಡುತ್ತಿದೆ. ಇದಲ್ಲದೇ ಸೇಲ್ಫಿ ತಗೆದುಕೊಳ್ಳುವಾಗ ನಿಮ್ಮ ದೇಹದ ಭಂಗಿ Madhu chandraಸರಿಯಿದ್ದಲ್ಲಿ ತೊಂದರೆಯಿಲ್ಲ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ  ಹಾಗಾಗಿ ಭಾರಿ ಜಾಗ್ರತೆವಹಿಸಬೇಕು. ಹಾಗಾಗಿ ಏನೇ ಅಂದರೂ ಸೇಲ್ಫಿಗೆ ಭಾರಿ ಬೆಲೆಯಿದೆ.

ಮಧುಚಂದ್ರ