ಅರೆ ನಗ್ನ ಪೇಂಟಿಂಗ್ಸ್ ಪ್ರದರ್ಶನ, ಕೆರಳಿದ ಮಹಿಳೆಯರು

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಲಾಗಿದ್ದ ಚಿತ್ರ ಪ್ರದರ್ಶನದಲ್ಲಿನ ಕೆಲ ಚಿತ್ರಗಳು ಗದ್ದಲಕ್ಕೆ ಕಾರಣವಾದವು. ಆ ಪೇಂಟಿಂಗ್ಸ್ ಹಾಕಿದ್ದ ಕಲಾವಿದರೊಬ್ಬರ ಮಹಿಳೆಯರು ಮೇಲೆ ಕೈ ಮಾಡಿದ ಘಟನೆ ನಡೆಯಿತು. ಕೆಲ ಚಿತ್ರಗಳನ್ನು ಕೆಳಗೆ ಹಾಕಿ ದ್ವಂಸ ಮಾಡಿ, ಮತ್ತೊಂದು ಪೇಂಟಿಂಗ್ ಹೊತ್ತೊಯ್ದಿದ್ದಾರೆ. ಗುರುವಾರ ಜೈಪುರದಲ್ಲಿ ಕಲೆಗಳ ಕುರಿತು ಒಂದು ಅಧಿವೇಶನ ನಡೆಯಿತು. ಅದರ ಭಾಗವಾಗಿ ಮಹಿಳೆಯರ ಕೆಲ ನಗ್ನ ಚಿತ್ರಗಳನ್ನು ಪ್ರದರ್ಶಿಸಿದ್ದರು.

ಇದರಿಂದ ಕೆರಳಿದ ರಾಷ್ಟ್ರೀಯ ಹಿಂದೂ ಏಕ್ತಾ ಸಂಘಟನೆಯ ಕೆಲವರು, ಲಾಲ್ ಸೇನಾ ಎಂಬ ಸಂಘಟನೆಯ ಅಧ್ಯಕ್ಷೆ ಹೇಮಲತಾ ಸೇರಿದಂತೆ ಇನ್ನಷ್ಟು ಜನ ದಾಳಿಗೆ ಇಳಿದರು. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಹೇಮಲತಾ ತುಂಬಾ ಗಂಭೀರವಾಗಿ ಪೇಂಟಿಂಗ್ಸ್ ಹಾಕಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ, ಪೇಂಟಿಂಗ್ಸ್ ಹೆಸರಿನಲ್ಲಿ ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ, ಚಿತ್ರ ಗೀಚಬೇಕೆಂದರೆ ಪ್ರಕೃತಿಯಲ್ಲಿ ಬೇರೆ ಯಾವ ಅಂಶಗಳೂ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

Related News

Comments (wait until it loads)
Loading...
class="clear">