ಶಿವಸೇನೆಯ ಏಕಾಂಗಿ ಸ್ಪರ್ಧೆ, ಫಡ್ನವೀಸ್ ಸರ್ಕಾರದಿಂದಲೂ ಹೊರನಡೆಯುತ್ತಾ?

ಮುಂಬೈ ಮಹಾನಗರಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಶಿವಸೇನೆ ನಿರ್ಧರಿಸಿದ ಮೇಲೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಎಲ್ಲರ ಗಮನ ಸೆಳೆದಿದೆ. ಬಿಜೆಪಿಯೊಂದಿಗೆ ಸ್ಥಾನ ಹೊಂದಾಣಿಕೆ ವಿಷಯದಲ್ಲಿ ಮಾತುಕತೆ ಮುರಿದುಬಿದ್ದ ನಂತರ, ಶಿವಸೇನೆಯ ಉದ್ಧವ್ ಠಾಕ್ರೆ ಪಕ್ಷದ ನಿಲುವು ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ತಾವು ಮತ್ತು ತಮ್ಮ ಪಕ್ಷದ ಇತರೆ ಸಚಿವರು ರಾಜೀನಾಮೆ ಪತ್ರಗಳನ್ನು ಜೇಬಿನಲ್ಲಿಟ್ಟುಕೊಂಡಿದ್ದು, ಪಕ್ಷದ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ಮೈತ್ರಿ ಸರ್ಕಾರದ ಹಿರಿಯ ಸಚಿವರಾದ ರಾಮದಾಸ್ ಹೇಳಿದ್ದಾರೆ.

ಆದರೆ ಮೈತ್ರಿ ಪಕ್ಷ ಶಿವಸೇನೆಯ ನಿರ್ಧಾರ ದೇವೇಂದ್ರ ಫಡ್ನವೀಸ್ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಬಿಜೆಪಿ ಹೇಳಿದೆ. ಇದೆಲ್ಲವನ್ನೂ ಎನ್‌ಸಿ‌ಪಿ ಮಾತ್ರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಗತ್ಯ ಬಿದ್ದರೆ ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊಮ್ಮಿರುವ ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲಿಸಲು ಎನ್‌ಸಿ‌ಪಿ ಸಿದ್ಧವಿದ್ದರೂ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಆಗುವ ಬೆಳವಣಿಗೆಗಳನ್ನು ಕಾದು ನೋಡುತ್ತಿದೆ.

ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಶಿವಸೇನೆ ಪರವಾಗಿ ಫಲಿತಾಂಶ ಬಂದರೆ, ಬಿಜೆಪಿಯಿಂದ ಮೈತ್ರಿ ಕಡಿದುಕೊಂಡು ಸರ್ಕಾರ ಉರುಳಿಸಲು ಶಿವಸೇನೆ ಹಿಂಜರಿಯುವುದಿಲ್ಲ ಎಂದು ಪಕ್ಷದ ಮುಖಂಡರುಗಳು ಹೇಳಿಕೊಳ್ಳುತ್ತಿದ್ದಾರಂತೆ.

English Summary: With Shiv Sena finding out to go it alone in city corporations and zilla panchayat polls throughout Maharahstra, now the attention has been shifted to stability of the BJP-led government in the state.