Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಅಸ್ಸಾಂನಲ್ಲಿ ಸರಣಿ ಸ್ಪೋಟ – News Mirchi

ಅಸ್ಸಾಂನಲ್ಲಿ ಸರಣಿ ಸ್ಪೋಟ

ಗಣರಾಜ್ಯೋತ್ಸವ ದಿನದಂದು ಅಸ್ಸಾಂನಲ್ಲಿನ ಮೂರು ಜಿಲ್ಲೆಗಳ ಏಳು ಕಡೆ ಉಗ್ರರು ಸರಣಿ ಬಾಂಬ್ ಸ್ಪೋಟ ನಡೆಸಿದ್ದಾರೆ.ಗುರುವಾರ ಬೆಳಗ್ಗೆ ಚಾರಾಯ್ಡೋ, ಸಿಬ್ಸಾಗರ್, ದಿಬ್ರೂಗರ್ ಮತ್ತು ತಿನ್ಸೂಕಿಯಾ ಜಿಲ್ಲೆಗಳಲ್ಲಿ ಸ್ಪೋಟಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗಳಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಈ ದಾಳಿಗಳನ್ನು ನಡೆಸಿದ್ದು ತಾನೇ ಎಂದು ಉಗ್ರ ಸಂಘಟನೆ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ(ಉಲ್ಫಾ) ಹೇಳಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸುತ್ತೇವೆ ಎಂದು ಎಚ್ಚರಿಸಿದೆ.

ಈ ಸ್ಪೋಟಗಳಲ್ಲಿ ಯಾವುದೇ ಜೀವಹಾನಿ ನಡೆದಿಲ್ಲ, ಉಗ್ರರು ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲೆಂದೇ ಜನಸಂಚಾರವಿಲ್ಲದ ಪ್ರದೇಶಗಳಲ್ಲಿ ಸ್ಪೋಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವರ್ಷ ಅಸ್ಸಾಂನ ದಿಗ್ಬೋಯ್ ಬಳಿ ಇದೇ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದರು.

7 minor bomb blasts were carried out by the restricted United Liberation Front of Assam-Independent (ULFA-I) on Thursday morning. Nobody was harmed in the blasts

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!