ಚೀನಾಗೆ ಅಮೆರಿಕಾ ಸವಾಲು, ವಿವಾದಿತ ಜಲ ಪ್ರದೇಶಕ್ಕೆ ಅಮೆರಿಕಾ ಯುದ್ಧ ನೌಕೆ – News Mirchi

ಚೀನಾಗೆ ಅಮೆರಿಕಾ ಸವಾಲು, ವಿವಾದಿತ ಜಲ ಪ್ರದೇಶಕ್ಕೆ ಅಮೆರಿಕಾ ಯುದ್ಧ ನೌಕೆ

ಚೀನಾಗೆ ಅಮೆರಿಕಾ ಮತ್ತೊಂದು ಸವಾಲೆಸೆದಿದೆ. ಭಾನುವಾರ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿರುವ ಕೃತಕ ದ್ವೀಪದ ಸನಿಹ ಅಮೆರಿಕದ ಕ್ಷಿಪಣಿ ವಿಧ್ವಂಸಕ ಸಮರ ನೌಕೆ ತೆರಳಿದೆ. ಇದಕ್ಕೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದ ವರ್ತನೆಯು ರಾಜಕೀಯ ಮತ್ತು ಮಿಲಿಟರಿ ಪ್ರಚೋದನೆಗೆ ಕಾರಣವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ದೂರಿದ್ದಾರೆ.

ಚೀನಾ, ತೈವಾನ್, ವಿಯೆಟ್ನಾಂ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ಟ್ರಿಟಾನ್ ಐಲ್ಯಾಂಡ್ ಗೆ 12 ನಾಟಿಕಲ್ ಮೈಲಿ ಸಮೀಪದಕ್ಕೆ ಅಮೆರಿಕದ ಯುಎಸ್ಎಸ್ ಸ್ಟೆಥಾಮ್ ಯುದ್ಧ ನೌಕೆ ಹೋಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಅಮೆರಿಕದ ಯುದ್ಧ ನೌಕೆ ಹೀಗೆ ಈ ವಿವಾದಿತ ದ್ವೀಪಕ್ಕೆ ಪ್ರವೇಶಿಸಿರುವುದು ಇದು ಎರಡನೇ ಬಾರಿ.

ಅಮೆರಿಕದ ಯುದ್ಧ ನೌಕೆ ತನ್ನ ಜಲಪ್ರದೇಶದೊಳಗೆ ಅತಿಕ್ರಮ ಪ್ರವೇಶ ಮಾಡಿದೆ ಎಂದು ದೂರಿರುವ ಚೀನಾ, ಪರಿಸ್ಥಿತಿಯನ್ನು ಎದುರಿಸಲು ಯುದ್ಧ ನೌಕೆಗಳು ಮತ್ತು ಫೈಟರ್ ಜೆಟ್ ವಿಮಾನಗಳನ್ನು ವಿಮಾನಗಳನ್ನು ರವಾನಿಸಿದೆ.

ದಕ್ಷಿಣ ಚೀನಾದ ಬಹುತೇಕ ಭಾಗದ ಮೇಲೆ ಚೀನಾ ತನ್ನ ಒಡೆತನವನ್ನು ಪ್ರದರ್ಶಿಸುತ್ತಿದ್ದರೆ, ಉಳಿದ ದೇಶಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್, ಮಲೇಷಿಯಾ, ಬ್ರುನೈ ಮತ್ತು ತೈವಾನ್ ಚೀನಾ ವಿರುದ್ಧ ಗುರ್ರ್ ಎನ್ನುತ್ತಿವೆ.

Loading...