ಲಂಬಾಣಿ ಜನಾಂಗದವರು ಕಟ್ಟುಪಾಡಿಗೆ ಬದ್ಧರಾಗಿ ಶಿಕ್ಷಣವನ್ನು ಮರೆತರು: ನಡಂಪಲ್ಲಿ ಶ್ರೀನಿವಾಸ್

ಚಿಂತಾಮಣಿ. ಫೆ,15: ಸಂತ ಸೇವಲಾಲ್ ರವರು ಕೇವಲ ಲಂಬಾಣಿ ಜನಾಂಗದ ಅಭಿವೃದ್ದಿಗೆ ಮಾತ್ರ ಶ್ರಮಿಸಿಲ್ಲ. ಅವರು ಸಮಸ್ತ ಜನಾಂಗದ ಅಭಿವೃದ್ದಿಗೆ ಹಾಗೂ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಪುರುಷರು ಎಂದು ತಾ.ಪಂಚಾಯ್ತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ ಹೇಳಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂತಸೇವಾಲಾಲ್ ರವರು ಕೊಟ್ಟ ಕೊಡುಗೆ ಕೇವಲ ಲಂಬಾಣಿ ಜನಾಂಗಕ್ಕೆ ಮಾತ್ರ ಮೀಸಲಾಗಿರಲಿಲ್ಲ ಎಂದ ಅವರು, ಈ ಜನಾಂಗದವರು ಪುರಾತನ ಕಾಲದಲ್ಲಿ ಅಗತ್ಯ ವಸ್ತುಗಳನ್ನು ರವಾನೆಗೆ, ಸಂತೆಗೆ, ಸರಕು ಸಾಗಾಣಿಕೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಆ ಕಾಲದಲ್ಲಿ ಸಾರಿಗೆಯನ್ನು ಪರಿಚಯ ಮಾಡಿಕೊಟ್ಟವರು ಲಂಬಾಣಿ ಜನಾಂಗದವರೇ ಎಂದು ಅವರು ತಿಳಿಸಿದರು.

ಹೊಟ್ಟೆಗೆ ಒದ್ದ ಸಿಪಿಎಂ ನಾಯಕ, ಮಹಿಳೆಗೆ ಗರ್ಭಪಾತ

ಲಂಬಾಣಿ ಜನಾಂಗದವರು ಇಂದಿಗೂ ಅವರ ಕಟ್ಟುಪಾಡುಗಳನ್ನು ಬಿಡದೆ ಪಾಲಿಸುತ್ತಿದ್ದು, ತಮ್ಮ ಮಕ್ಕಳ ಬಗ್ಗೆ ಗಮನಹರಿಸುವುದು ಕಡಿಮೆಯಾಗಿದೆ ಎಂದ ಅವರು, ಈಗಿನ ಆಧುನಿಕ ಜಗತ್ತಿನಲ್ಲೂ ಕಟ್ಟುಪಾಡುಗಳಿಗೆ ಮೀಸಲಾದ ಈ ಜನಾಂಗ ಇಂದು ಬದಲಾಗುವ ಅವಶ್ಯಕತೆ ಇದೆ. ಈ ಜನಾಂಗದಲ್ಲಿ ಈಗಲೂ ಅಪೌಷ್ಠಕಾಂಶದ ಕೊರತೆಯಿಂದ ಮಕ್ಕಳು ಸರಿಯಾಗಿ ಬೆಳೆಯುತ್ತಿಲ್ಲ ಆದರಿಂದ ಈ ಜನಾಂಗಕ್ಕೆ ಸರ್ಕಾರ ವೈದ್ಯಕೀಯ ನೆರವು ನೀಡುತಿದ್ದು ಈ ಜನಾಂಗದವರು ತಮ್ಮ ಮಕ್ಕಳನ್ನು ವೃತ್ತಿಗೆ ಮೀಸಲಿಡದೆ ಸರಿಯಾದ ವಿದ್ಯಾಭ್ಯಾಸ ಕೊಟ್ಟು ಅವರು ಉನ್ನತ ಸ್ಥಾನಕ್ಕೆ ತಲುಪಲು ಸಹಕರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶಾಂತಮ್ಮ ವರದರಾಜುರವರು ಮಾತನಾಡುತ್ತಾ, ಜನಾಂಗದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿ, ಮುಂದಿನ ದಿನಗಳಲ್ಲಿ ಅವರು ಉನ್ನತ ಸ್ಥಾನಕ್ಕೆ ಹೋದರೆ ಅಲ್ಲಿ ಜನಾಂಗಕ್ಕೆ ಮಾತ್ರವಲ್ಲದೆ ದೇಶಕ್ಕೂ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆಂದು ತಿಳಿಸಿದರು.

ಸಾಕ್ಷಿ ನಾಶಕ್ಕೆ ಯತ್ನ: ಪವರ್ ಮಿನಿಸ್ಟರ್ ಗೆ ಬಂಧನದ ಭೀತಿ

ಟಿ.ವೆಂಕಟರವಣ ನಾಯಕ್ ಮುಖ್ಯ ಭಾಷಣಕಾರಗಿದ್ದ  ಕಾರ್ಯಕ್ರಮದಲ್ಲಿ ಜನಾಂಗದ ಸಾಧಕರಾದ ಕೆ.ಎಸ್.ಆರ್.ಟಿ.ಸಿ. ವೆಂಕಟರವಣ, ಬಿ.ಎಸ್.ಎನ್.ಎಲ್. ಶಂಕರ್ ನಾಯಕ್, ದೊಡ್ಡಬೊಮ್ಮನಹಳ್ಳಿ ಶಿಕ್ಷಕರಾದ ವೆಂಕಟರಾಮ್ ನಾಯಕ್, ಕಮಲ್ ಮನ್ಸಿಂಗ್ ನಾಯಕ್, ತಿರುಪಲ್‍ ನಾಯಕ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಶ್ರೀನಿವಾಸ್, ತಾಲ್ಲೂಕು ಕಛೇರಿ ಶಿರಸ್ತೇದಾರ್ ಅಣ್ಣಾಯಪ್ಪ, ಮೀನುಗಾರಿಕೆ ಇಲಾಖೆ ನಿದೇಶಕರಾದ ಡಾ|| ನಾಗೇಂದ್ರಬಾಬು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನರೇಂದ್ರಕುಮಾರ್ ಸೇರಿದಂತೆ ಕೆಲವು ಇಲಾಖೆಯ ಅಧಿಕಾರಿಗಳು, ಶಾಲಾ ಮಕ್ಕಳು ಹಾಜರಿದ್ದರು.

Get Latest updates on WhatsApp. Send ‘Subscribe’ to 8550851559