ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ : ದಾಖಲಾಯಿತು ಮೊದಲ ದೂರು

ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು, ಈ ವೇಳೆ ಅಂಗವಿಕಲರು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಂತು ರಾಷ್ಟ್ರ ಗೀತೆಯನ್ನು ಗೌರವಿಸಬೇಕು ಎಂದು ಸುಪ್ರೀಂ ತೀರ್ಪು ನೀಡಿತ್ತು.

ಇದೀಗ ಚೆನ್ನೈನ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ವೇಳೆ ಎದ್ದು ನಿಲ್ಲದೆ ಅಗೌರವ ನೀಡಿದ ಆರೋಪದ ಮೇಲೆ ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದಾಖಲಾದ ಮೊದಲ ದೂರು ಇದಾಗಿದೆ.

ಚೆನ್ನೈನ ಕಾಶಿ ಚಿತ್ರಮಂದಿರದಲ್ಲಿ ಪ್ರಸಾರವಾಗುತ್ತಿರುವ ವೇಳೆ ಎಲ್ಲರೂ ಎದ್ದು ನಿಂತು ಗೌರವಿಸಿದರೆ, ಒಬ್ಬ ಮಹಿಳೆ ಸೇರಿದಂತೆ ಒಟ್ಟು ಏಳು ಜನ ಎದ್ದು ನಿಲ್ಲಲಿಲ್ಲ. ಇವರನ್ನು ಎದ್ದು ನಿಲ್ಲುವಂತೆ ಮತ್ತೊಂದು ತಂಡ ವಾದಕ್ಕಿಳಿಯಿತು. ನಂತರ ಪೊಲೀಸರು ಲೀನಸ್ ರೋಫನ್ ಮತ್ತವನ ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾರೆ.

Loading...

Leave a Reply

Your email address will not be published.

error: Content is protected !!