ಸೌದಿಯಲ್ಲಿ ಅಕ್ರಮವಾಗಿ ನೆಲೆಸಿರುವವರು ಶಿಕ್ಷೆಯಿಲ್ಲದೆ ಸ್ವದೇಶಕ್ಕೆ ವಾಪಸಾಗಲು ಇದೊಂದು ಅವಕಾಶ – News Mirchi

ಸೌದಿಯಲ್ಲಿ ಅಕ್ರಮವಾಗಿ ನೆಲೆಸಿರುವವರು ಶಿಕ್ಷೆಯಿಲ್ಲದೆ ಸ್ವದೇಶಕ್ಕೆ ವಾಪಸಾಗಲು ಇದೊಂದು ಅವಕಾಶ

ಸೌದಿ ಅರೇಬಿಯಾದ ಕಾನೂನುಗಳನ್ನು ಉಲ್ಲಂಘಿಸಿ ಆ ದೇಶದಲ್ಲಿರುವವರು ಪುನಃ ಅವರವರ ದೇಶಗಳಿಗೆ ವಾಪಸಾಗಲು ಅನುಕೂಲವಾಗುವಂತೆ ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದ ಅಮ್ನೆಸ್ಟಿ(ಕ್ಷಮಾದಾನ)ದ ಅವಧಿ ಜುಲೈ 25ಕ್ಕೆ ಮುಗಿಯುತ್ತದೆ. ಜೀವನಾಧಾರಕ್ಕಾಗಿ ಸೌದಿ ಅರೇಬಿಯಾಗೆ ಹೋಗಿ ಅಲ್ಲಿ ಸಂಕಷ್ಟದಲ್ಲಿ ಸಿಲುಕಿದ ಸಾವಿರಾರು ಅನಿವಾಸಿ ಭಾರತೀಯರಿಗೆ ಇದೊಂದು ಉತ್ತಮ ಅವಕಾಶ.

ಅತ್ಯಂತ ಕಠಿಣ ಕಾನೂನುಗಳನ್ನು ಜಾರಿ ಮಾಡುವ ಸೌದಿಯಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ತಮ್ಮ ತಾಯ್ನಾಡಿಗೆ ವಾಪಸಾಗಲು ಇದು ಉತ್ತಮ ಅವಕಾಶವಾದರೂ, ತಿಳಿದೋ ತಿಳಿಯದೆಯೋ ಮಾಡಿದ ಸಣ್ಣ ಸಣ್ಣ ತಪ್ಪುಗಳಿಂದಾಗಿ ಈ ಅವಕಾಶವನ್ನೂ ಬಳಸಿಕೊಳ್ಳಲಾರದೆ ಸಂಕಷ್ಟದಲ್ಲಿ ಸಿಲುಕಿರುವವರು ಎಷ್ಟೋ ಜನ ಅಲ್ಲಿದ್ದಾರೆ.

ಸೌದಿ ಸರ್ಕಾರ ಮಾರ್ಚ್ 29 ರಿಂದ 90 ದಿನಗಳ ಕಾಲ ಕ್ಷಮಾದಾನ(ಅಮ್ನೆಸ್ಟಿ) ಪ್ರಕಟಿಸಿತ್ತು. ನಂತರ ಆ ಗಡುವನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸಿತ್ತು. ಇದರ ಪ್ರಕಾರ ಜುಲೈ 25ಕ್ಕೆ ಈ ಗಡುವು ಮುಗಿಯಲಿದೆ. ಈ ಅಮ್ನೆಸ್ಟಿಯಿಂದಾಗಿ ಅಂದಾಜು 30 ಸಾವಿರ ಅನಿವಾಸಿ ಭಾರತೀಯರು ಸ್ವದೇಶಕ್ಕೆ ವಾಪಸಾಗುತ್ತಾರೆ ಎನ್ನಲಾಗುತ್ತಿದೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಲವರು ಈ ಅವಕಶವನ್ನು ಬಳಸಿಕೊಂಡು ಸ್ವದೇಶಕ್ಕೆ ಹಿಂದಿರುಗುವ ಆಸೆಯಿದ್ದರೂ, ಸ್ವದೇಶಕ್ಕೆ ವಾಪಸಾದರೆ ಅಲ್ಲಿ ಮಾಡುವುದೇನು, ಮುಂದಿನ ಭವಿಷ್ಯವೇನು ಎಂದು ಆತಂಕದಲ್ಲಿದ್ದಾರೆ. ಉದ್ಯೋಗ ಕಲ್ಪಿಸುತ್ತೇವೆ ಎಂದು ಭಾರತ ಸರ್ಕಾರವೇನಾದರೂ ಭರವಸೆ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಸಣ್ಣ ಪುಟ್ಟ ತಪ್ಪು ಮಾಡಿ ಸೌದಿ ಕಾನೂನು ಉಲ್ಲಂಘಿಸಿದ ನೂರಾರು ಅನಿವಾಸಿ ಭಾರತೀಯರಿಗೆ ಕಾರ್ಮಿಕರಿಗೆ ಸೌದಿ ಸರ್ಕಾರ ಪ್ರಕಟಿಸಿದ ಅಮ್ನೆಸ್ಟಿ ಲಾಭವಿಲ್ಲದಂತಾಗಿದೆ.

ಅಕ್ರಮವಾಗಿ ನೆಲೆಸಿರುವುದು ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ ಎಲ್ಲಾ ದೇಶದ ನಾಗರಿಕರಿಗೆ ಈ ಅಮ್ನೆಸ್ಟಿ ಯೋಜನೆ ಅನ್ವಯವಾಗುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳದೆ ಅಲ್ಲಿಯೇ ಉಳಿದುಕೊಳ್ಳುವವರಿಗೆ ಒಂದು ಲಕ್ಷ ರಿಯಾಲ್ ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ ವಿಧಿಸುತ್ತಾರೆ. ಈ ಯೋಜನೆಯನ್ನು ಬಳಸಿಕೊಂಡವರ ಬೆರಳಚ್ಚು ತೆಗೆದುಕೊಳ್ಳುವುದಿಲ್ಲವಂತೆ, ಅಂದರೆ ಮತ್ತೆ ಯಾವಾಗಾದರೂ ಸರಿ ಅವರು ಸೌದಿಗೆ ಹೋಗಬಹುದು. ಅವರ ಮೇಲೆ ಟ್ರಾವೆಲ್ ಬ್ಯಾನ್ ಕೂಡಾ ಇರುವುದಿಲ್ಲ. ಅಧಿಕಾರಿಗಳ ಪ್ರಕಾರ ಸೌದಿಯಲ್ಲಿ ಉದ್ಯೋಗ ವೀಸಾಗಳಿಂದ ಹೋದ ಅಕ್ರಮ ವಲಸಿಗರೇ ಹೆಚ್ಚಾಗಿದ್ದಾರಂತೆ. ಹಜ್, ಉಮ್ರಾ ವೀಸಾಗಳ ಅಕ್ರಮ ವಲಸಿಗರು ಕಡಿಮೆ.

ಮಾಲೀಕರ ಕಿರುಕುಳ ತಾಳಲಾರದೆ ಕೆಲಸ ಬಿಟ್ಟು ಪರಾರಿಯಾದ ಸಾವಿರಾರು ಉದ್ಯೋಗಿಗಳ ಪಾಸ್ ಪೋರ್ಟ್ ಗಳನ್ನು ಭಾರತೀಯ ರಾಯಭಾರಿ ಕಛೇರಿಗೆ ಸೌದಿ ಅಧಿಕರಿಗಳು ನೀಡಿದ್ದಾರೆ. ಸೌದಿಯಲ್ಲಿ ‘ಹುರೂಬ್’ ಎಂದು ಪ್ರಕಟಿಸಿದ ಸೌದಿಯಲ್ಲಿನ ಭಾರತೀಯರು 8,837 ಜನ ಎಂದು ಸೌದಿಯಲ್ಲಿನ ಭಾರತೀಯ ರಾಯಭಾರಿ ಕಛೇರಿ ವೆಬ್ಸೈಟಿನಲ್ಲಿ ಪ್ರಕಟಿಸಿದ್ದಾರೆ. ಕಳೆದ ತಿಂಗಳು ಪ್ರಕಟಿಸಿದ ಮಾಹಿತಿ ಪ್ರಕಾರ ಭಾರತದ ರಾಯಭಾರಿ ಕಛೇರಿಗಳು ಇಲ್ಲಿಯವರೆಗೂ 26 ಸಾವಿರ ಔಟ್ ಪಾಸ್ ಗಳನ್ನು ಜಾರಿ ಮಾಡಿವೆ. ಔಟ್ ಪಾಸ್ ಗಳಿಗಾಗಿ ಜಿದ್ದಾದಲ್ಲಿನ ಇಂಡಿಯನ್ ಕಾನ್ಸುಲೇಟ್ ಜನರಲ್ ಕಛೇರಿಗೆ 26,713 ಜನ ಭಾರತೀಯರು ಅರ್ಜಿ ಸಲ್ಲಿಸಿದ್ದಾರೆ. ರಿಯಾದ್ ನಲ್ಲಿನ ಭಾರತೀಯ ರಾಯಭಾರಿ ಕಛೇರಿಗೆ 20,131 ಜನ ಅರ್ಜಿ ಸಲ್ಲಿಸಿದ್ದಾರೆ.

ಸಹಾಯಕ್ಕಾಗಿ ಭಾರತೀಯರು ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Loading...