ರಾಜಭವನದಲ್ಲಿ ರಾಸಲೀಲೆ ಆರೋಪ: ಮೇಘಾಲಯ ರಾಜ್ಯಪಾಲ ರಾಜೀನಾಮೆ

ಮೇಘಾಲಯ ರಾಜಭವನವನ್ನು ರಾಜ್ಯಪಾಲರು ರಾಸಲೀಲೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲ ಶಣ್ಮುಗನಾಥನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರು ರಾಜಭವನವನ್ನು ಹುಡುಗಿಯರ ಕ್ಲಬ್ ಆಗಿ ಪರಿವರ್ತಿಸಿದ್ದು, ಅವರ ಆದೇಶದ ಅನುಸಾರವೇ ಯುವತಿಯರು ರಾಜಭವನದ ಅವರ ಕಛೇರಿಗೆ ಬಂದು ಹೋಗುತ್ತಿದ್ದಾರೆ. ಅವರಲ್ಲಿ ಹಲವು ಯುವತಿಯರು ನೇರವಾಗಿ ಗವರ್ನರ್ ಮಲಗುವ ಕೋಣೆಗೆ ಹೋಗುತ್ತಿದ್ದಾರೆ. ಇದರಿಂದಾಗಿ ರಾಜಭವನದ ಘನತೆಗೆ ಕುಂದುಂಟಾಗುವುದಲ್ಲದೇ ಭದ್ರತಾ ದೃಷ್ಟಿಯಿಂದಲೂ ಕಂಟಕ ಎಂದು ಮೇಘಾಲಯ ರಾಜ್ಯಪಾಲರ ವಿರುದ್ಧ ರಾಜಭವನದ ಸಿಬ್ಬಂದಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು.

ರಾಜ್ಯಪಾಲರಿಂದ ತಾವು ಮಾನಸಿಕ ಒತ್ತಡ, ಅವಮಾನಗಳನ್ನು ಅನುಭವಿಸುತ್ತಿದ್ದೇವೆ, ಶಣ್ಮುಗನಾಥನ್ ಅವರನ್ನು ಕೂಡಲೇ ಆ ಹುದ್ದೆಯಿಂದ ಕೆಳಗಿಳಿಸಿ ಎಂದು ರಾಜಭವನದಲ್ಲಿ ಕೆಲಸ ಮಾಡುವ 98 ಜನ 11 ಅಂಶಗಳನ್ನು ಕೂಡಿದ ದೂರಿನ ಮೇಲೆ ಸಹಿ ಮಾಡಿದ್ದಾರೆ. ಅಷ್ಟೇ ಅಲ್ಲ ಈ ದೂರಿನ ಪತ್ರವನ್ನು ರಾಷ್ಟ್ರಪತಿಗಳಿಗೆ, ಕೇಂದ್ರ ಗೃಹಸಚಿವ,‌ ಮೇಘಾಲಯ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ರವರಿಗೆ ಕಳುಹಿಸಿದ್ದಾರೆ. ತಮ್ಮ ಬಳಿ ಕೆಲಸ ಮಾಡಲು ಕೇವಲ ಯುವತಿಯರನ್ನಷ್ಟೇ ನೇಮಕ ಮಾಡಿಕೊಂಡಿದ್ದಾರೆ. ಇದ್ದ ಒಬ್ಬರು ಪುರುಷ ಕಾರ್ಯದರ್ಶಿಯನ್ನು ಆತನ ಕಛೇರಿಗೆ ವಾಪಸ್ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ರಾಜಭವನದಲ್ಲಿ ಪಿಆರ್‌ಒ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾಗ, ಶಣ್ಮುಗನಾಥನ್ ತನ್ನನ್ನು ಅಪ್ಪಿಕೊಂಡು ಮುತ್ತಿಡಲು ಪ್ರಯತ್ನಿಸಿ ಅಸಭ್ಯವಾಗಿ ವರ್ತಿಸಿದರು ಎಂದು ಈ ಹಿಂದೆ ಮಹಿಳೆಯೊಬ್ಬರು ಆರೋಪಿಸಿದ್ದರು. ಆದರೆ ಉದ್ಯೋಗಕ್ಕಾಗಿ ಹಲವರನ್ನು ಸಂದರ್ಶನಕ್ಕಾಗಿ ಕರೆಯುತ್ತೇವೆ, ಉದ್ಯೋಗ ಬರದಿದ್ದವರು ಹೀಗೆ ಆರೋಪ ಮಾಡುತ್ತಾರೆ ಎಂದು ಆರೋಪಗಳನ್ನು ಅಲ್ಲಗೆಳೆದಿದ್ದರು. ಗುರುವಾರವೂ ತಮ್ಮ ಮೇಲೆ ಅಂತದ್ದೇ ಆರೋಪ ಕೇಳಿಬಂದಾಗಲೂ ಅವರು ಅಲ್ಲಗೆಳೆದಿದ್ದರು. ಆದರೆ ಸಿಬ್ಬಂದಿಯ ದೂರಿನೊಂದಿಗೆ ಸಿವಿಲ್ ಸೊಸೈಟಿ ವುಮೆನ್ ಆರ್ಗನೈಸೇಷನ್ ಸಹಿ ಚಳುವಳಿ ಆರಂಭಿಸಿದ್ದರ ಜೊತೆಗೆ ಹಲವೆಡೆ ಪ್ರತಿಭಟನೆಗಳು ನಡೆದವು. ಹೀಗಾಗಿ ರಾಜ್ಯಪಾಲ ಶಣ್ಮುಗನಾಥನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

After sexual harassment charges, Meghalaya Governor V Shanmuganathan resigned late on Thursday, Government sources said. 98 Raj Bhavan employees demanded his removal and had sent a letter to the Meghalaya Chief Minister Mukul Sangma, Prime Minister Narendra Modi and President Pranab Mukherjee.