ಬೆಂಗಳೂರಿಗೆ ಇಂದು ಅಮಿತ್ ಶಾ ಆಗಮನ – News Mirchi

ಬೆಂಗಳೂರಿಗೆ ಇಂದು ಅಮಿತ್ ಶಾ ಆಗಮನ

ಮೂರು ದಿನಗಳ ಕರ್ನಾಟಕ ಪ್ರವಾಸದ ಭಾಗವಾಗಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರವಾಸದ ವೇಳೆ ಪಕ್ಷದ ರಾಜ್ಯ ನಾಯಕರು, ಕಾರ್ಯಕರ್ತರು ಮತ್ತು ಆರ್.ಎಸ್.ಎಸ್ ಮುಖಂಡರ ಜೊತೆ ಸುಮಾರು 25 ಸಭೆಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯ ನಾಯಕರೊಂದಿಗೆ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸುವ ಕುರಿತು ಪ್ರವಾಸ ಸಂದರ್ಭದಲ್ಲಿ ಚರ್ಚೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಮುಂದುವರೆದಿರುವ ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಬಣಗಳ ಮುಸುಕಿನ ಗುದ್ದಾಟಕ್ಕೂ ಅಮಿತ್ ಶಾ ಆಗಮನ ಒಂದು ಗತಿ ಕಾಣಿಸಬಹುದು ಎಂಬುದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

Loading...