ಇವರ ಮಾತನ್ನು ಈಗ ದೇಶವೇ ಕಿವಿಗೊಟ್ಟು ಕೇಳುತ್ತದೆ

ಈ ವ್ಯಕ್ತಿ ಪತ್ರಿಕಾಗೋಷ್ಠಿ ಕರೆದರೆ ಸಾಕು ಈ ದೇಶವೇ ಕಿವಿಗೊಟ್ಟು ಕುತೂಹಲದಿಂದ ಕೇಳುತ್ತೆ. ಗರಿಷ್ಠ ಮುಖಬೆಲೆಯ ನೋಟು ರದ್ದುಗೊಂಡ ನಿರ್ಧಾರ ಹೊರ ಬಿದ್ದ ದಿನದಿಂದ ಪ್ರಮುಖ ವಿಷಯಗಳನ್ನು ಪ್ರೆಸ್ ಮೀಟ್ ಕರೆದು ವಿವರಿಸುತ್ತಿದ್ದಾರೆ ಇವರು. ಅಲ್ಪಾವಧಿಯಲ್ಲೇ ದೇಶಾದ್ಯಂತ ಪಾಪ್ಯುಲರ್ ಆದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಈಗ ಸದಾ ಸುದ್ದಿಯಲ್ಲಿರುವ ಹೆಸರು.

ಪ್ರೆಸ್ ಮೀಟ್ ಕರೆದ ಪ್ರತಿ ಬಾರಿಯೂ ಗವರ್ನರ್ ಅನ್ನು ಕೂಡಾ ಡಾಮಿನೇಟ್ ಮಾಡಿ ಮಾತನಾಡುವ ಇವರ ಮಾತಿನ ಶೈಲಿ ಆಸಕ್ತಿಯಿಂದ ಕೇಳುವಂತೆ ಮಾಡುತ್ತದೆ. ಅಗತ್ಯ ವಿಷಯಗಳನ್ನು ವಿವರಿಸಿ ಹೇಳುವುದು ಇವರ ವಿಶೇಷತೆ.

ದೆಹಲಿಯಲ್ಲಿ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಎಂ.ಎ ಮಾಡಿದ ಅವರು ತಮಿಳುನಾಡಿನಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಒರಿಸ್ಸಾದಿಂದ ಬಂದರೂ, ತಮಿಳುನಾಡಿನ ಕೇದಾರ್‌ನಲ್ಲಿ ಕಾರ್ಯನಿರ್ವಹಿಸಿದರು. ಅದಕ್ಕೂ ಮುನ್ನ ಅವರು ತಮಿಳುನಾಡಿನ ಎಲ್ಐಸಿ, ಒಎನ್‌ಜಿಸಿ ಮುಂತಾ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸೆಪ್ಟೆಂಬರ್ ನಿಂದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

Related News

loading...
error: Content is protected !!