ಗುಜರಾತ್ ಕಾಂಗ್ರೆಸ್ ಗೆ ದೊಡ್ಡ ಹೊಡೆತ, ಮಾಜಿ ಮುಖ್ಯಮಂತ್ರಿ ವಘೇಲಾ ರಾಜೀನಾಮೆ – News Mirchi

ಗುಜರಾತ್ ಕಾಂಗ್ರೆಸ್ ಗೆ ದೊಡ್ಡ ಹೊಡೆತ, ಮಾಜಿ ಮುಖ್ಯಮಂತ್ರಿ ವಘೇಲಾ ರಾಜೀನಾಮೆ

ಗುಜರಾತ್ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಶಂಕರ್ ಸಿಂಗ್ ವಘೇಲಾ ಪ್ರಕಟಿಸಿದ್ದಾರೆ. ತಮ್ಮ 77 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಗಾಂಧಿನಗರದಲ್ಲಿ ಸುಮಾರು 5 ಸಾವಿರ ಜನರೊಂದಿಗೆ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಭಾಷಣ ಮಾಡಿದರು. ಈ ವೇಳೆ ಪಕ್ಷವನ್ನು ಬಿಡಲು ಕಾರಣಗಳನ್ನೂ ಅವರು ವಿವರಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡುವ ವಿಷಯದಲ್ಲಿ ಪಕ್ಷಕ್ಕೆ ಸರಿಯಾದ ಯೋಜನೆಯಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ತಮಗೆ ಪಕ್ಷದಲ್ಲಿ ಸ್ವಾತಂತ್ರ್ಯವಿಲ್ಲದೆ ಮಾಡುತ್ತಿದ್ದಾರೆ ಎಂದು ಆರೋಪಿಸಿರು. ಎರಡು ದಶಕಗಳ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ವಘೇಲಾ, ಮತ್ತೆ ಕೇಸರಿ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ 24 ಗಂಟೆಗಳ ಹಿಂದಷ್ಟೇ ತಮ್ಮನ್ನು ಉಚ್ಛಾಟಿಸಿದೆ ಎಂದು ಅವರು ಬಹಿರಂಗಪಡಿಸಿದರು. ಸದ್ಯ ಪ್ರತಿಪಕ್ಷ ನಾಯಕರಾಗಿರುವ ಅವರು, ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲಿಯೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ. “ಕಾಂಗ್ರೆಸ್ ಪಕ್ಷ ನನ್ನನ್ನು ನಿನ್ನೆ ಹೊರಹಾಕಿದೆ. ಈಗ ನಾನು ಸ್ವತಂತ್ರ ಜೀವಿಯಾಗಿದ್ದೇನೆ. ಯಾವ ಪಕ್ಷದೊಂದಿಗೂ ಸಂಬಂಧವಿಲ್ಲ. ಇನ್ನು ಯಾವ ಪಕ್ಷವನ್ನೂ ನಾನು ಸೇರುವುದಿಲ್ಲ” ಎಂದು ಹೇಳಿದರು.

ಬಿಜೆಪಿಯನ್ನು ದೇಶದಿಂದ ಹೊರಗೋಡಿಸುತ್ತೇವೆ, ಮಮತಾ ಸವಾಲ್

ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಗುಜರಾತಿನಲ್ಲಿ ಅಡ್ಡ ಮತದಾನ ನಡೆದಿದೆಯೆಂಬ ಮಾತುಗಳ ಹಿನ್ನೆಲೆಯಲ್ಲಿ ವಘೇಲಾ ರವರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟಿಸಿದೆ ಎನ್ನಲಾಗುತ್ತಿದೆ. ರಾಷ್ಟ್ರಪತಿ ಚುನಾವಣೆ ಮತದಾನದ ಸಂದರ್ಭದಲ್ಲಿ ಎಂಟು ಕಾಂಗ್ರೆಸ್ ಶಾಸಕರು ಎನ್.ಡಿ.ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಮತ ಹಾಕಿದ್ದು ಚರ್ಚಾಸ್ಪದವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಗೆ ಸರಿಯಾದ ಯೋಜನೆಯಿಲ್ಲ, ಮುಂದಾಲೋಚನೆಯ ಕೊರತೆಯಿದೆ ಎಂದು ವಘೇಲಾ ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆ ಬಗೆಹರಿಸಲು ಚೀನಾ, ಅಮೆರಿಕಾ ನೆರವು ಕೇಳಿ: ಫಾರೂಕ್ ಅಬ್ದುಲ್ಲಾ

ಮತ್ತೊಂದು ಕಡೆ ಶಂಕರ್ ಸಿಂಗ್ ವಘೇಲಾ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ ಎಂದು ಕಾಂಗ್ರೆಸ್ ಪಕ್ಷ ಶುಕ್ರವಾರ ಸ್ಪಷ್ಟಪಡಿಸಿದೆ ಒಬ್ಬ ಹಿರಿಯ ಸಚಿವರಾಗಿ ಅವರೆಂದರೆ ಪಕ್ಷಕ್ಕೆ ತುಂಬಾ ಗೌರವವಿದೆ. ಅವರ ಮೇಲೆ ಎಂದೂ ತನಿಖೆ ನಡೆಸಿದ್ದಾಗಲೀ ಪಕ್ಷದಿಂದ ಉಚ್ಛಾಟಿಸುವುದಾಗಲಿ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸರ್ಜೇವಾಲ್ ಹೇಳಿದ್ದಾರೆ. ಈಗ ಆಧಾರರಹಿತ ಪ್ರಚಾರ ನಡೆಯುತ್ತಿದೆ, ವಘೇಲಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದು ಅವರ ವೈಯುಕ್ತಿಕ ವಿಚಾರ. ಅವರು ಪಕ್ಷದಲ್ಲೇ ಇದ್ದರೆ ನಾವು ತುಂಬಾ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

Loading...