ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ನಾವು ಯಾರೊಂದಿಗಾದರೂ ಮಾತನಾಡುವಾಗ ಅವರ ಕಣ್ಣುಗಳ ಗಾತ್ರ, ಬಣ್ಣ, ಕೂದಲಿನ ಉದ್ದ, ಅವರ ಎತ್ತರ ಮುಂತಾದವುಗಳನ್ನೆಲ್ಲಾ ಕೂಡಿ ನಮ್ಮ ಮೆದುಳು ಅವರ ಬಗ್ಗೆ ಒಂದು ರೀತಿಯ ತನ್ನದೇ ಆದ ಅಭಿಪ್ರಾಯವನ್ನು ನೆನಪಿನಲ್ಲಿಟ್ಟುಕೊಂಡಿರುತ್ತದೆ. ಆದರೆ ವಕ್ತಿಗಳ ಉಗುರುಗಳ ಆಕಾರದಿಂದಲೂ ನಾವು ಆ ವ್ಯಕ್ತಿ ಎಂತಹವರು ಎಂದು ತಿಳಿಯಬಹುದು… ಅದನ್ನೀಗ ನೋಡೋಣ.

ಲಂಬವಾಗಿ ಉದ್ದವಾದ ಉಗುರು
ಉದ್ದವಾದ ಉಗುರು ಹೊಂದಿರುವಂತಹವರ ಬಲ ಭಾಗದ ಮೆದುಳು ಹೆಚ್ಚು ಚುರುಕಾಗಿ ಬೆಳೆದಿರುತ್ತದೆ. ಮತ್ತು ನೀವು ಹೆಚ್ಚು ಕಲ್ಪಾನಾಲೋಕದಲ್ಲಿ ಜೀವಿಸುತ್ತೀರಿ ಎಂಬುದು ಇದು ತೋರಿಸುತ್ತದೆ. ಆದರೆ ನಿಮ್ಮ ಸುತ್ತಲಿನ ವಾತಾವರಣದಿಂದಾಗಿ ನೀವು ಸುಲಭವಾಗಿ ಮೋಸ ಹೋಗುತ್ತೀರಿ. ಈ ವಿಷಯದಲ್ಲಿ ನೀವು ಹೆಚ್ಚು ಎಚ್ಚರಿಕೆಯಿಂದರಬೇಕಾಗಿರುತ್ತದೆ. ತಾರ್ಕಿಕವಾಗಿ ಎಡ ಮೆದುಳನ್ನು ಬಳಸಿ ಎದುರಿನ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಪರಸ್ಪರ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ.

ವಿಶಾಲವಾದ ಉಗುರು
ಇವರಲ್ಲಿ ಎಡ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ. ಇಂತಹವರು ನಿರರ್ಗಳವಾಗಿ ಸ್ಪಷ್ಟವಾಗಿ ಮಾತನಾಡಬಲ್ಲವರಾಗಿರುತ್ತಾರೆ. ನಿಮಗನಿಸಿದ್ದನ್ನು ನೇರವಾಗಿ ಹಿಂಜರಿಕೆಯಿಲ್ಲದೆ ಮಾತನಾಡುತ್ತೀರಿ. ಇತರರಿಗೆ ನೀವು ನೇರ ನಡೆ ನುಡಿಯ ವ್ಯಕ್ತಿ ಎಂಬ ಅಭಿಪ್ರಾಯ ಬರುವುದರಲ್ಲಿ ಸಂದೇಹವಿಲ್ಲ. ಆದರೆ ನೀವು ಬೇಗ ಸಹನೆಯನ್ನು ಕಳೆದುಕೊಳ್ಳುತ್ತೀರಿ. ಕೆಲ ಸಂದರ್ಭಗಳಲ್ಲಿ ಸ್ವಲ್ಪ ತಾಳ್ಮೆಯನ್ನು ಪ್ರದರ್ಶಿಸುವುದು ಉತ್ತಮ. ಭಾವನಾತ್ಮಕ ವ್ಯಕ್ತಿಗಳೊಂದಿಗೆ ನೀವು ಬೆರೆಯಲಾರಿರಿ.

ದುಂಡಾದ ಅಥವಾ ಮೊಟ್ಟೆಯಾಕಾರದ ಉಗುರು
ನೀವು ನಿಮ್ಮಿಚ್ಚೆಯಂತೆ ನಡೆಯುವವರು. ನಿಮ್ಮೆದುರಲ್ಲಿ ಯಾರಾದರೂ ವಾದಕ್ಕಿಳಿದರೆ, ಮಧ್ಯಪ್ರವೇಶಿಸುವವರಲ್ಲಿ ಮೊದಲಿಗರಾಗಿರುತ್ತೀರಿ. ನಿಮ್ಮ ವ್ಯಕ್ತಿತ್ವ ಹೆಚ್ಚಿನ ಜನರಿಗೆ ಮೆಚ್ಚುಗೆಯಾಗುತ್ತದೆ. ಯಾವುದೇ ವಿಷಯವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವವರಲ್ಲ ಎಂಬ ಭಾವನೆ ನಿಮ್ಮ ಸ್ನೇಹಿತರಿಗೆ ಬರಬಹುದು, ಹೀಗಾಗಿ ನಿಮ್ಮ ಸ್ನೇಹಿತರು ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳದಂತೆ ಎಚ್ಚರವಹಿಸಿ. ಇತರರೊಂದಿಗೆ ಹೋಲಿಸಿದರೆ ನೀವು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರುತ್ತೀರಿ.

ಚೌಕಾಕಾರದ ಉಗುರು
ನೀವು ಶ್ರಮಜೀವಿ ಮತ್ತು ಧೈರ್ಯವುಳ್ಳವರು. ನಿಮ್ಮ ಗಂಭೀರ ವ್ಯಕ್ತಿತ್ವ ಉಳ್ಳೆಯ ಅಂಶ, ಆದರೆ ಕೆಲ ಸಂದರ್ಭಗಳಲ್ಲಿ ನಿಮ್ಮ ಕಾಠಿಣ್ಯತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳದಿರುವುದು ಒಂದು ನ್ಯೂನತೆಯಾಗಿ ಕಂಡು ಬರುತ್ತದೆ. ಮೊಂಡುತನವನ್ನು ಕಡಿಮೆ ಮಾಡಲು ಪ್ರಯತ್ನಿಸಿ, ಹೆಚ್ಚು ಹೊಂದಿಕೊಂಡು ಹೋಗಲು ಯತ್ನಿಸಿದರೆ ಇನ್ನೂ ಹೆಚ್ಚು ಸರಾಗವಾಗಿ ಕಾರ್ಯನಿರ್ವಹಿಸಬಹುದು.

ತ್ರಿಭುಜಾಕೃತಿ ಉಗುರು
ನಿಮ್ಮಲ್ಲಿ ಹೊಸ ಹೊಸ ಆಲೋಚನೆಗಳು ಹೆಚ್ಚು. ಇತರರು ಗಮನಿಸಿದ ವಿಷಯಗಳನ್ನು ಪತ್ತೆ ಥಟ್ಟನೆ ಗುರುತಿಸುವಲ್ಲಿ ಸದಾ ಮುಂದು. ತ್ರಿಭುಜಾಕೃತಿ ಉಗುರು ಹೊಂದಿರುವವರು ತಲೆಕೆಳಗಾಗಿ ತ್ರಿಭುಜಾಕೃತಿ ಹೊಂದಿರುವವರಿಗೆ ಹೋಲಿಸಿದರೆ ತಮ್ಮ ಸುತ್ತಲಿನ ಅಶಿಸ್ತಿನ ಜನರನ್ನು ಸಹಿಸುವುದಿಲ್ಲ.

ಬಾದಾಮಿ ಆಕಾರದ ಉಗುರು
ನಿಮಗೆ ಕಲ್ಪನೆಗಳು ಹೆಚ್ಚಾಗಿದ್ದು, ಎಲ್ಲರೊಂದಿಗೂ ಪ್ರಾಮಾಣಿಕರಾಗಿರುತ್ತಿರಿ. ಎದುರಿನವರೊಂದಿಗೆ ವಿನಯಶೀಲರಾಗಿ, ಸಭ್ಯರಾಗಿರುತ್ತೀರಿ. ಆದರೆ ನಿಮಗೆ ಸ್ವಲ್ಪ ಕೋಪ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಒಂದು ಕ್ಷಣ ಹಿಂದೆ ಸರಿದು ಶಾಂತವಾಗಿ ನಂತರ ಮುಂದುವರೆದರೆ ನಿಮಗೇ ಒಳ್ಳೆಯದು.

 
{ಕನ್ನಡವೇ ಸತ್ಯ ಫೇಸ್ಬುಕ್ ಗ್ರೂಪ್ ಸೇರಲು ಕ್ಲಿಕ್ ಮಾಡಿ}

ಕತ್ತಿಯಾಕಾರದ ಉಗುರು
ನಿಮ್ಮ ಗುರಿಯನ್ನು ಸಾಧಿಸಲು ಎಷ್ಟು ಕಷ್ಟಪಡಲೂ ಹಿಂಜರಿಯುವುದಿಲ್ಲ. ನಿಮ್ಮ ಆದರ್ಶಗಳಿಗೆ ಅನುಕೂಲವಾಗುವಂತಿದ್ದರೆ, ನಿಮಗಿಷ್ಟವಿಲ್ಲದಿದ್ದರೂ ಆ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಆದರೆ ನಿಮಗೆ ಸಹಕಾರದ ಕೊರತೆ ಕಾಡುತ್ತದೆ. ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ, ನಿರಾಳರಾಗಿ ಇರುವಂತಹ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ನಿಮಗೆ ತಾಳ್ಮೆ ಕಡಿಮೆ. ಇತರರೊಂದಿಗೆ ಸೇರಿ ಕೆಲಸ ಮಾಡುವುದರಲ್ಲಿ ನಿಮಗೆ ಹೆಚ್ಚು ಪ್ರಯೋಜನವಿದೆ.

ತೂಕ ಕಡಿಮೆ ಮಾಡಲು ಕುಡಿಯಿರಿ ಮನೆಯಲ್ಲಿಯೇ ತಯಾರಿಸುವ ಪೇಯಗಳು

Loading...
error: Content is protected !!