ನಿತೀಶ್ ವಿರುದ್ಧ ಮುನಿಸು, ಹೊಸ ಪಕ್ಷ ಕಟ್ಟುವತ್ತ ಶರದ್ ಯಾದವ್ – News Mirchi
We are updating the website...

ನಿತೀಶ್ ವಿರುದ್ಧ ಮುನಿಸು, ಹೊಸ ಪಕ್ಷ ಕಟ್ಟುವತ್ತ ಶರದ್ ಯಾದವ್

ಪಾಟ್ನಾ: ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಪಕ್ಷದೊಂದಿಗೆ ಜೆಡಿಯು ಮುಖಂಡ ನಿತೀಶ್ ಕುಮಾರ್ ಮೈತ್ರಿ ಕಡಿದುಕೊಂಡ ನಂತರ ಬಿಹಾರ ರಾಜಕೀಯದಲ್ಲಿ ಕೆಲ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ಜೆಡಿಯು ಅಗ್ರ ನಾಯಕ ಶರದ್ ಯಾದವ್ ಹೊಸ ಪಕ್ಷ ಕಟ್ಟುವ ಲಕ್ಷಣಗಳು ಗೋಚರಿಸುತ್ತಿವೆ. ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಹಳೆಯ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿಯಾದ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ತೀರ್ಮಾನಕ್ಕೆ ಆ ಪಕ್ಷದ ಹಿರಿಯ ನಾಯಕ ಶರದ್ ಯಾದವ್ ಇನ್ನೂ ಅಸಂತೃಪ್ತಿ ಹೊರಹಾಕುತ್ತಲೇ ಇದ್ದಾರೆ.

ಫೇಸ್ಬುಕ್ಕಿಗೆ ತಲೆನೋವಾದ ಚಾಟ್ ಬಾಟ್ಸ್ ನ ಹೊಸ ಭಾಷೆ!

ಶರದ್ ಯಾದವ್ ಆಪ್ತರಾದ ವಿಜಯ್ ವರ್ಮ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಹಲವು ಜೆಡಿಯು ನಾಯಕರನ್ನು ಶರದ್ ಯಾದವ್ ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಸಿದ್ಧಾಂತಗಳಿಗೆ ಸೂಕ್ತವಾದಂತಹ ಪಕ್ಷಗಳೊಂದಿಗೂ ಶರದ್ ಯಾದವ್ ಚರ್ಚೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಹೊಸ ಪಕ್ಷಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಶೀಘ್ರವೇ ಹೊರಬೀಳುವ ಸಾಧ್ಯತೆಯೂ ಇದೆ ಎಂದು ವಿಜಯ್ ವರ್ಮ ಹೇಳಿದ್ದಾರೆ. ಮುಖ್ಯವಾಗಿ ನಿತೀಶ್ ಕುಮಾರ್ ತಮಗೆ ಯಾವುದೇ ಮಾಹಿತಿ ನೀಡದೆ ಜನರ ತೀರ್ಪನ್ನು ಗೌರವಿಸದೆ ಹೊಸ ಸರ್ಕಾರ ರಚನೆ ಮಾಡಿರುವುದು ಹಿರಿಯ ನಾಯಕ ಶರದ್ ಯಾದವ್ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

2019ರಲ್ಲಿ ಮೋದಿಗೆ ಸವಾಲೆಸೆಯಬಲ್ಲವರು ಯಾರೂ ಇಲ್ಲ: ನಿತೀಶ್ ಕುಮಾರ್

ಮತ್ತೊಬ್ಬ ಜೆಡಿಯು ಅಧಿಕೃತ ವಕ್ತಾರ ಸಂಜಯ್ ಸಿಂಗ್ ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಶರದ್ ಯಾದವ್ ತಮ್ಮ ಹಿರಿಯ ನಾಯಕ, ಆದರೆ ಅವರು ಹೊಸ ಮಾರ್ಗ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಶರದ್ ಯಾದವ್ ತಮಗೆ ಸರಿಯೆನಿಸಿದ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ ಎಂದರು. ಬಿಜೆಪಿ ಹಠಾವೋ ದೇಶ್ ಬಚಾವೋ ಹೆಸರಿನಲ್ಲಿ ಆಗಸ್ಟ್ 27 ರಂದು ಆರ್.ಜೆ.ಡಿ ಆಯೋಜಿಸುತ್ತಿರುವ ರ್ಯಾಲಿಯಲ್ಲಿ ಜೆಡಿಯು ಸಂಸದೀಯ ಪಕ್ಷದ ನಾಯಕರಾದ ಶರದ್ ಯಾದವ್ ಪಾಲ್ಗೊಳ್ಳಲಿದ್ದಾರೆ.

Contact for any Electrical Works across Bengaluru

Loading...
error: Content is protected !!