ಗಿನ್ನಿಸ್ ಸೇರಲಿರುವ ವಿಧಾನಸೌಧ ಮುಂದಿನ ಸಾಮೂಹಿಕ ಶೀರ್ಷಾಸನ – News Mirchi

ಗಿನ್ನಿಸ್ ಸೇರಲಿರುವ ವಿಧಾನಸೌಧ ಮುಂದಿನ ಸಾಮೂಹಿಕ ಶೀರ್ಷಾಸನ

ಭಾನುವಾರ ವಿಧಾನಸೌಧದ ಆವರಣದಲ್ಲಿ ಯೋಗಥಾನ್ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ರವರು ಚಾಲನೆ ನೀಡಿದರು. ವಿಧಾನಸೌಧದ ಪೂರ್ವ ದ್ವಾರದ ಬಳಿ 2087 ಜನ ಏಕಕಾಲದಲ್ಲಿ 30 ಸೆಕೆಂಡುಗಳ ಕಾಲ ಶೀರ್ಷಾಸನ ಪ್ರದರ್ಶಿಸಿದರು. ಅಂತರಾಷ್ಟ್ರೀಯ ಯೋಗಾ ದಿನಾಚರಣೆಗೆ ಮುನ್ನ ಪೂರ್ವಭಾವಿಯಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಇಂದು ನಡೆದ ಸಾಮೂಹಿಕ ಶೀರ್ಷಾಸನ ಕಾರ್ಯಕ್ರಮ ಗಿನ್ನಿಸ್ ದಾಖಲೆಯಾಗಿದೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ಚೆನ್ನೈನಲ್ಲಿ ನಡೆದ ಶೀರ್ಷಾಸನ ಪ್ರದರ್ಶನ ಗಿನ್ನಿಸ್ ದಾಖಲೆಯಾಗಿತ್ತು.

ಯೋಗಕ್ಕೆ ಯಾವುದೇ ಬಂಡವಾಳ ಬೇಕಿಲ್ಲ, ಯೋಗಾ ಸಾಧಕರಿಂದ ಆರೋಗ್ಯವಂತ ಸಮುದಾಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಅವರು, ಶೀರ್ಷಾಸನ ಮಾಡುವಾಗ ಗುರುತ್ವಾಕರ್ಷಣೆ ಹಿಮ್ಮುಖವಾಗಿ ಕೆಲಸ ಮಾಡುತ್ತದೆ, ಆದ್ದರಿಂದ ಮೆದುಳಿಗೆ ರಕ್ತ ಸಂಚಾರ ಸುಲಭವಾಗಿ ಮನಸ್ಸು ಹಗುರಾಗುತ್ತದೆ. ಜಗತ್ತೇ ನಮ್ಮ ಕಡೆ ನೋಡುತ್ತಿದ್ದರೆ, ನಾವು ಮಾತ್ರ ಬೇರೆ ಯಾರನ್ನೋ ಅನುಸರಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ವಿಧಾನಪರಿಷತ್ ಸದಸ್ಯ, ಶರವಣ ಮುಂತಾದವರು ಪಾಲ್ಗೊಂಡಿದ್ದರು.

Contact for any Electrical Works across Bengaluru

Loading...
error: Content is protected !!