ಶೀಲಾ ದೀಕ್ಷಿತ್ ಕಾಂಗ್ರೆಸ್ ಗೆ ಹೊರೆ |News Mirchi

ಶೀಲಾ ದೀಕ್ಷಿತ್ ಕಾಂಗ್ರೆಸ್ ಗೆ ಹೊರೆ

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದ್ದಾರೆ ಎಂದು ಬಿಜೆಪಿ ಸೇರಿದ ದೆಹಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅರ್ವಿಂದರ್ ಸಿಂಗ್ ಲವ್ಲೀ ಹೇಳಿದ್ದಾರೆ. ಲವ್ಲೀ ಸೇರಿದಂತೆ 20 ದೆಹಲಿ ಕಾಂಗ್ರೆಸ್ ನಾಯಕರು ಬುಧಬಾರ ಬಿಜೆಪಿ ಸೇರ್ಪಡೆಯಾಗಿದರು. ಅದರ ಮರುದಿನವೇ ಶೀಲಾ ದೀಕ್ಷಿತ್ ವಿರುದ್ಧ ದಾಳಿಗೆ ಮುಂದಾಗಿದ್ದಾರೆ ಲವ್ಲೀ.

ಶೀಲಾ ದೀಕ್ಷಿತರಂತೆ ಕಾಂಗ್ರೆಸ್ ಗೆ ಹೊರೆಯಂತೆ ಇರುವುದಕ್ಕಿಂತ ದೇಶ ಕಾಯೋ ಸೈನಿಕರ ಪರ ಕೆಲಸ ಮಾಡುವ ಬಿಜೆಪಿ ಸೇರುವುದು ಉತ್ತಮ ಎಂದು ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಅವರು ಹೇಳಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ವಿರುದ್ಧವೂ ಹರಿಹಾಯ್ದ ಲವ್ಲೀ, ಮಾಕೆನ್ ಕಠಿಣ ಶ್ರಮಕ್ಕಿಂತ ಹಾಯಾಗಿರಲು ಇಷ್ಟಪಡುವಂತಹ ಮನುಷ್ಯ ಎಂದು ಜರೆದಿದ್ದಾರೆ.

Loading...
loading...
error: Content is protected !!