ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಉಗ್ರ ಸಂಘಟನೆಗಳ ಶಾಖೆ: ವಸೀಂ ರಿಜ್ವಿ

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಒಂದು ಉಗ್ರ ಸಂಘಟನೆಗಳ ಶಾಖೆಯಾಗಿದೆ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಂ ರಿಜ್ವಿ ಹೇಳಿದ್ದಾರೆ. ಬಾಬ್ರಿ ಮಸೀದಿ, ರಾಮಮಂದಿರ ವಿವಾದ ಮಾತುಕತೆ ಮೂಲಕ ಬಗೆಹರಿಸಲು ಮುಂದಾಗಿದ್ದ ಸಲ್ಮಾನ್ ನದ್ವಿ ಅವರನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಹೊರಹಾಕಿದ ವಿಷಯವಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಒಂದು ಉಗ್ರ ಸಂಘಟನೆಗಳ ಶಾಖೆಯಾಗಿದ್ದು, ತನ್ನ ಕಠೋರ ವರ್ತನೆಗಳಿಂದ ದೇಶಕ್ಕೆ ಮಾರಕವಾಗಿ ಬದಲಾಗುತ್ತಿದೆ ಎಂದು ವಸೀಂ ರಿಜ್ವಿ ಆರೋಪಿಸಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಅನ್ನು ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಲ್ಲಿ ಒಡಕು

ಕಠೋರ ಮನಸ್ಥಿತಿಗಳನ್ನು ಹೊಂದಿರುವಂತಹ ಮುಸ್ಲಿಮರು ದೇಶಕ್ಕೆ ಮಾರಕ, ಮುಸ್ಲಿಮರ ಕುರಿತು ಮಹತ್ವದ ನಿರ್ಧಾರಗಳನ್ನು ಪಾಕ್ ಮತ್ತು ಸೌದಿ ಅರೇಬಿಯಾಗಳಲ್ಲಿನ ಉಗ್ರ ಸಂಘಟನೆಗಳು ತೆಗೆದುಕೊಳ್ಳುತ್ತಿವೆ. ಅವು ದೇಶದ ಶಾಂತೊ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಾಡುತ್ತಿವೆ ಎಂದು ರಿಜ್ವಿ ಹೇಳಿದ್ದಾರೆ.

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ನದ್ವಿ ಅವರೇ ಬೋರ್ಡ್ ನಲ್ಲಿ ಕಠೋರ ಮನಸ್ಥಿತಿಯವರೇ ತುಂಬಿಕೊಂಡಿದ್ದಾರೆ ಎಂದು ಹೇಳಿದ ಮೇಲೆ ನಾವು ಹೇಳುವುದಕ್ಕೇನಿದೆ. ಯಾರು ಕಠೋರ ಮನಸ್ಥಿತಿಯವರು? ಒಬ್ಬ ಸಾಮಾನ್ಯ ಮುಸ್ಲಿಂ ಕಠೋರ ವ್ಯಕ್ತಿಯಾಗಲಾರ. ಉಗ್ರ ಸಂಘಟನೆಗಳು ಕಠೋರ ವ್ಯಕ್ತಿತ್ವಗಳು, ಅವರಿಗೆ ಮುಸ್ಲಿಮರ ಘನತೆಯನ್ನು ಹಾಳು ಮಾಡುವುದನ್ನು ಹೊರತುಪಡಿಸಿದರೆ ಸಾಮಾನ್ಯ ಮುಸ್ಲಿಮನ ಕುರಿತು ಅವರಿಗೆ ಕಾಳಜಿಯಿಲ್ಲ ಎಂದು ರಿಜ್ವಿ ಆರೋಪಿಸಿದರು.

ಅಗತ್ಯ ಬಿದ್ದರೆ ದೇಶಕ್ಕಾಗಿ ಗಡಿಯಲ್ಲಿ ನಿಂತು ಹೋರಾಡಲು ಆರ್.ಎಸ್.ಎಸ್ ಸಿದ್ಧ

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶದ ಕಾನೂನನ್ನು ಒಪ್ಪಿಕೊಳ್ಳುವುದಿಲ್ಲ, ಈ ದೇಶದ ನ್ಯಾಯಾಲಯಗಳ ತೀರ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಟ್ರಿಪಲ್ ತಲಾಖ್ ಅನ್ನು ಬೆಂಬಲಿಸುವುದಿಲ್ಲ. ಅದರ ಬದಲಾಗಿ ದೇಶ ಬಿಟ್ಟು ಪರಾರಿಯಾಗಿರುವ ಝಾಕೀರ್ ನಾಯಕ್ ಗೆ ಬೆಂಬಲ ನೀಡುತ್ತಾರೆ. ಇವರೆಲ್ಲಾ ಭಾರತದ ಕಾನೂನುಗಳನ್ನು ಬಿಟ್ಟು, ಪಾಕ್ ಮತ್ತು ಸೌದಿ ಅರೇಬಿಯಾ ನೀತಿಗಳನ್ನು ತಮ್ಮನ್ನು ಆಳುತ್ತಿವೆ ಎಂದು ಭಾವಿಸಿದ್ದಾರೆ ಎಂದರು.

ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಬಹುದು ಮತ್ತು ಮಸೀದಿ ಸ್ವಲ್ಪ ದೂರದಲ್ಲಿ ನಿರ್ಮಿಸಬಹುದು ಎಂಬ ಶಿಯಾ ವಕ್ಫ್ ಬೋರ್ಡ್ ಸಲಹೆಗೆ ನದ್ವಿ ಬೆಂಬಲ ವ್ಯಕ್ತಪಡಿಸಿದ್ದರು,

Get Latest updates on WhatsApp. Send ‘Subscribe’ to 8550851559