ಸಮುದ್ರದಲ್ಲಿ ಶಿವಾಜಿ ಸ್ಮಾರಕಕ್ಕೆ ಮುಹೂರ್ತ ಫಿಕ್ಸ್

ಮುಂಬಯಿ: ಕೆಲವು ವರ್ಷಗಳಿಂದ ಮರಾಠಿಗರು ನಿರೀಕ್ಷಿಸುತ್ತಿರುವ ಅರಬ್ಬೀ ಸಮುದ್ರದಲ್ಲಿ ತಮ್ಮ ಅರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಶಿವಾಜಿ ಸ್ಮಾರಕ್ಕೆ ಡಿಸೆಂಬರ್ 24 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಮುದ್ರದಲ್ಲಿ ಒಟ್ಟು 16 ಎಕರೆಗಳ ವಿಸ್ತೀರ್ಣದಲ್ಲಿ ರೂ.3600 ಕೋಟಿ ವೆಚ್ಚದಲ್ಲಿ ಸ್ಮಾರಕವನ್ಮು ನಿರ್ಮಿಸಲಿದ್ದಾರೆ. ನಿರ್ಮಾಣ ಕಾರ್ಯವನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲಿದ್ದಾರೆ.

ಕಾಂಗ್ರೆಸ್, ಎನ್ಸಿಪಿ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಸಮುದ್ರದಲ್ಲಿ ಶಿವಾಜಿ ಮಹಾರಾಜ್ ಸ್ಮಾರಕ ನಿರ್ಮಾಣದ ಘೋಷಣೆ ಮಾಡಿದ್ದರು. ನಂತರ ಬಂದ ಪೃಥ್ವಿರಾಜ್ ಚೌಹಾಣ್ ಕೂಡಾ ಸಕಾರಾತ್ಮಕವಾಗಿದ್ದರು.

ಆದರೆ ಅಂದಿನ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನುಮತಿ ನೀಡದ ಕಾರಣ ನೆನೆಗುದಿಗೆ ಬಿದ್ದಿತ್ತು. ಇದೀಗ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದು, ಸ್ಮಾರಕ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ.

Loading...

Leave a Reply

Your email address will not be published.

error: Content is protected !!