ಮುಲಾಯಂ ಜೊತೆ ಹೊಸ ಪಕ್ಷ ಸ್ಥಾಪಿಸುತ್ತೇನೆ: ಶಿವಪಾಲ್ |News Mirchi

ಮುಲಾಯಂ ಜೊತೆ ಹೊಸ ಪಕ್ಷ ಸ್ಥಾಪಿಸುತ್ತೇನೆ: ಶಿವಪಾಲ್

ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ ಸೃಷ್ಟಿಯಾಗಿರುವ ಭಿನ್ನಾಭಿಪ್ರಾಯಗಳು ತಾರಕಕ್ಕೇರಿವೆ. ಸದ್ಯ ಎಲ್ಲಾ ತಿಳಿಯಾದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ, ಒಳಗೊಳಗೆ ಅಸಮಾಧಾನದ ಹೊಗೆಯಾಡುತ್ತಲೇ ಇದೆ. ಸಮಾಜವಾದಿ ಪಕ್ಷದೊಂದಿಗೆ ಸೈಕಲ್ ಚಿಹ್ನೆಯನ್ನೂ ಅಖಿಲೇಶ್ ಯಾದವ್ ತನ್ನದಾಗಿಸಿಕೊಂಡ ನಂತರ, ಅಖಿಲೇಶ್ ನೇತೃತ್ವದಲ್ಲೇ ಪಕ್ಷ ಚುನಾವಣೆಗೆ ಹೋಗುತ್ತಿದೆ.

ಈಗ ಮುಲಾಯಂಗೆ ಆರಂಭದಿಂದಲೂ ಬೆನ್ನಿಗೆ ನಿಂತು ಬೆಂಬಲಿಸುತ್ತಿದ್ದ ಸಹೋದರ ಶಿವಪಾಲ್ ಯಾದವ್ ಹೊಸ ಬಾಂಬ್ ಸ್ಪೊಟಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಜೊತೆ ಸೇರಿ ಹೊಸ ಪಕ್ಷ ಸ್ಥಾಪಿಸುವುದಾಗಿ ಘೊಷಿಸಿದ್ದಾರೆ.

ಉತ್ತರ ಪ್ರದೇಶದ ಫಲಿತಾಂಶ ಮಾರ್ಚ್ 11 ರಂದು ಹೊರಬಿದ್ದ ನಂತರ ತಾನು ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತೇನೆ ಎಂದು ಮಂಗಳವಾರ ಇಟಾವಾದಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಪ್ರಕಟಿಸಿದರು. ಸದ್ಯ ಅವರು ಸಮಾಜವಾದಿ ಪಕ್ಷದಿಂದ ಜಸ್ವಂತ್ ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಮಂಗಳವಾರ ನಾಮಿನೇಷನ್ ಸಲ್ಲಿಸಿದ ನಂತರವೇ ಈ ಪ್ರಕಟಣೆ ನೀಡಿರುವುದು ಗಮನಾರ್ಹ.

Loading...
loading...
error: Content is protected !!