ಕಪ್ಪು ಪಟ್ಟಿಯಲ್ಲಿ ಶಿವಸೇನಾ ಸಂಸದ – News Mirchi
We are updating the website...

ಕಪ್ಪು ಪಟ್ಟಿಯಲ್ಲಿ ಶಿವಸೇನಾ ಸಂಸದ

ಮುಂಬೈ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ನಡೆಸಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ರವರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾಗಿ ಏರ್ ಇಂಡಿಯಾ ಪ್ರಕಟಿಸಿದೆ. ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದಕ್ಕೆ ಈಗಾಗಲೇ ಪೊಲೀಸರಿಗೆ ಆತನ ವಿರುದ್ಧ ಸಂಸ್ಥೆ ದೂರು ನೀಡಿದೆ. ಇದೀಗ ಆತನನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆದರೆ ಈ ನಿಷೇಧ ಎಷ್ಟು ದಿನಗಳು ಮುಂದುವರೆಯುತ್ತದೆ ಎಂಬ ವಿಷಯ ಪ್ರಕಟಿಸಿಲ್ಲ.

ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ವರ್ತಿಸುವವರನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ಕಪ್ಪು ಪಟ್ಟಿಗೆ ಸೇರಿಸುವ ನಿಯಮವಿದೆ. ಆದರೆ ಇದುವರೆಗೂ ಯಾರನ್ನೂ ಕಪ್ಪು ಪಟ್ಟಿಗೆ ಸೇರಿಸಿದ ಉದಾಹರಣೆಯಿಲ್ಲ. ಇದೇ ಮೊದಲ ಬಾರಿಗೆ ಶಿವಸೇನೆ ಸಂಸದನಿಗೆ ಈ ಭಾಗ್ಯ ದೊರೆತಿದೆ. ಹೀಗಾಗಿ ರವೀಂದ್ರ ಗಾಯಕ್ವಾಡ್ ಕೇವಲ ಏರ್ ಇಂಡಿಯಾ ಮಾತ್ರವಲ್ಲ, ಇತರೆ ಯಾವುದೇ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲೂ ಪ್ರಯಾಣಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!