ಸ್ಟೈಲಾಗಿ ಹೋಗಿ ಮನೆಗೆಲಸ: ಅಮೆರಿಕದ ಆಸೆ ಬಿಡಿ ಎಂದ ಭಾರತದ ಯುವತಿ |News Mirchi

ಸ್ಟೈಲಾಗಿ ಹೋಗಿ ಮನೆಗೆಲಸ: ಅಮೆರಿಕದ ಆಸೆ ಬಿಡಿ ಎಂದ ಭಾರತದ ಯುವತಿ

ಅಮೆರಿಕಕ್ಕೆ ಹೋಗುವುದೆಂದರೆ ಒಂದು ಅದೃಷ್ಟ, ಅಲ್ಲಿ ವಿಲಾಸಿ ಜೀವನ ನಡೆಸಬಹುದು, ಅಲ್ಲಿ ಒಂದು ವರ್ಷ ಉದ್ಯೋಗ ಮಾಡಿ ಬಂದರೆ ಸಾಕು ಭಾರತದಲ್ಲಿ ಇಡೀ ಜೀವನ ಚಿಂತೆಯಿಲ್ಲದೆ ಸವೆಸಬಹುದು ಎಂದು ಯೋಚಿಸುವವರೇ ಹೆಚ್ಚು. ಆದ್ದರಿಂದಲೇ ಯುವಕರು ಅಮೆರಿಕಾದಲ್ಲಿ ಉದ್ಯೋಗ ಮಾಡುವುದನ್ನೇ ಕನಸು ಕಾಣುತ್ತಿರುತ್ತಾರೆ.

ಬಿಟೆಕ್ ಓದಿ ಅಲ್ಲಿಗೆ ಹೋದ ಯುವತಿಯೊಬ್ಬಳು ಅಲ್ಲಿನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾಳೆ. ಯಾವುದೋ ಸಾಫ್ಟ್‌ವೇರ್ ಉದ್ಯೋಗ ಮತ್ತೊಂದೋ ಮಾಡುವ ಉದ್ದೇಶದೊಂದಿಗೆ ಅಲ್ಲಿಗೆ ಹೊರಟ ಭಾರತೀಯರು ವಿಧಿಯಿಲ್ಲದೆ ಮನೆಗೆಲಸ ಮಾಡುತ್ತಿದ್ದಾರಂತೆ. ತಾನೂ ಕೂಡಾ ಮನೆಗೆಲಸ ಮಾಡುತ್ತಿರುವುದಾಗಿ ಆಕೆ ವೀಡಿಯೋದಲ್ಲಿ ಹೇಳಿದ್ದಾಳೆ.

ಯಾವ ಭಾರತೀಯನೂ ಅಮೆರಿಕಾ ಬರುವ ಆಸೆ ಇಟ್ಟುಕೊಳ್ಳಬೇಡಿ, ಹಾಯಾಗಿ ಭಾರತದಲ್ಲೇ ಜೀವಿಸಿ. ಅಮೆರಿಕಕ್ಕೆ ಬಂದರೆ ಜೀವನ ಗೊಂದಲಮಯವಾಗುತ್ತದೆ ಎಂದು ನೋವನ್ನು ಅದುಮಿಟ್ಟು ಮುಖದಲ್ಲಿ ಬಲವಂತದ ನಗುವಿನೊಂದಿಗೆ ಸಲಹೆ ನೀಡಿದ್ದಾಳೆ.

ಬೆಳಗ್ಗೆ ಎದ್ದರೆ ಎಲ್ಲರೂ ಸ್ಟೈಲ್ ಆಗಿ ಬ್ಯಾಗುಗಳು ನೇತು ಹಾಕಿಕೊಳ್ಳುತ್ತಾರೆ. ಕೆಲವರು ಬಸ್ಸಿನಲ್ಲಿ, ಕೆಲವರು ಕಾರಿನಲ್ಲಿ ಉದ್ಯೋಗಕ್ಕೆ ಹೊರಡುತ್ತಾರೆ. ಆದರೆ ಅವರು ಮಾಡುವುದು ಮನೆಗೆಲಸ. ಮನೆ ಒರೆಸುವುದು, ಮಕ್ಕಳನ್ನು ನೋಡಿಕೊಳ್ಳುವುದು, ಊಟ ಬಡಿಸುವುದು ಮುಂತಾದ ಕೆಲಸಗಳನ್ನೇ ಅವರು ಮಾಡುವುದು.

ಉಳಿದುಕೊಳ್ಳುವ ಮನೆ ನೋಡಲು ಅಬ್ಬಾ ಎನ್ನುವಂತಿರುತ್ತವೆ, ಆದರೆ ಬಾಡಿಗೆ ನೋಡಿದರೆ ತಮ್ಮ ಸಂಪಾದನೆಗಿಂತ ಹೆಚ್ಚು. ಹೀಗಾಗಿ ಒಂದು ಮನೆಯಲ್ಲಿ ಹದಿನೈದು ಹದಿನಾರು ಜನ ಉಳಿದುಕೊಳ್ಳುತ್ತಾರೆ ಎಂದು ಹೇಳಿರುವ ಆಕೆ ಭಾರತದಲ್ಲೇ ಉದ್ಯೋಗ ಮಾಡಿಕೊಂಡು ಉಳಿಯುವುದು ಉತ್ತಮ ಎಂಬ ಸಲಹೆ ನೀಡಿದ್ದಾಳೆ.

Loading...
loading...
error: Content is protected !!