ಬಾಗಪ್ಪ ಹರಿಜನ ಮೇಲೆ ಶೂಟೌಟ್ ಪ್ರಕರಣ: 6 ಆರೋಪಿಗಳ ಬಂಧನ – News Mirchi

ಬಾಗಪ್ಪ ಹರಿಜನ ಮೇಲೆ ಶೂಟೌಟ್ ಪ್ರಕರಣ: 6 ಆರೋಪಿಗಳ ಬಂಧನ

ವಿಜಯಪುರ: ಆಗಸ್ಟ್ 8 ರಂದು ವಿಜಯಪುರ ಕೋರ್ಟ್ ಆವರಣದಲ್ಲಿ ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ರಮೇಶ ಹಡಪದ್, ಭೀಮಶ್ಯಾ ಹರಿಜನ, ನಾಮದೇವ ದೊಡ್ಡಮನಿ, ರಜಾಕ್ ಕಾಂಬಳೆ, ಮಲ್ಲೇಶ್ ಬಿಂಗೇರಿ ಮತ್ತು ಪ್ರಭೂ ಜಮಾದಾರ ಬಂಧಿತ ಆರೋಪಿಗಳು. ಬಂಧಿತರಿಂದ 6 ಮೊಬೈಲ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಶೂಟೌಟ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಗಪ್ಪ ಹರಿಜನನನ್ನು ಬಿಎಲ್ಇಡಿ ಆಸ್ಪತ್ರೆಗೆ ದಾಖಲಿಸಾಗಿತ್ತು. ಅಲ್ಲಿ ಆತನ ದೇಹದಿಂದ ಮೂರು ಗುಂಡುಗಳನ್ನು ಹೊರತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಬಾಗಪ್ಪ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Loading...