ಹಣ ಮಾಡಲು ಸೃಷ್ಟಿಯಾದ ಕೃತಕ ಉಪ್ಪಿನ ಕೊರತೆ

ನೋಟು ರದ್ದು ಪರಿಣಾಮದಿಂದ ಜನರಲ್ಲಿ ಉಂಟಾಗಿರುವ ಗೊಂದಲವನ್ನು ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಒಗ್ಗಟ್ಟಾದ ಕೆಲ ದೊಡ್ಡ ದೊಡ್ಡ ವ್ಯಾಪಾರಿಗಳು ದಿನಬಳಕೆಯ ವಸ್ತುಗಳನ್ನು ಗೋಡೌನ್ ನಲ್ಲಿ ಅಕ್ರಮ ದಾಸ್ತಾನು ಮಾಡಿ ಕೃತಕ ಕೊರತೆ ಸೃಷ್ಟಿಸಲು ಯತ್ನಿಸಿದ್ದಾರೆ. ಇದರ ಭಾಗವಾಗಿ ಅವರು ಉತ್ತರ ಪ್ರದೇಶದಲ್ಲಿನ ಉಪ್ಪಿನ ಕೊರತೆಯ ವದಂತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ಎರಡು ಮೂರು ಗಂಟೆಗಳಲ್ಲೇ ವಿಪರೀತ ಪ್ರಚಾರ ನಡೆಸಿ ದೇಶದಲ್ಲಿ ಉಪ್ಪಿನ ಕೊರತೆ ಉಂಟಾಗಿದೆ ಎಂದು ಜನರನ್ನು ನಂಬಿಸಿದರು. ಈ ಮೂಲಕ ರೂ. 18 ಕ್ಕೆ ಮಾರಾಟವಾಗಬೇಕಿದ್ದ ಉಪ್ಪು ಪ್ಯಾಕೆಟ್ ಅನ್ನು ರೂ. 200 ಕ್ಕೆ ಮಾರಾಟ ಮಾಡಿದ್ದಾರೆ.

ಅಂಗಡಿಗಳಲ್ಲಿ ಉಪ್ಪು ಪಾಕೆಟ್ ಖರೀದಿಸಿದ ಏಜೆಂಟ್ ಗಳು ಅದನ್ನು ಎರಡು ಪಟ್ಟು ಹಣಕ್ಕೆ ಮಾರಿಕೊಂಡಿದ್ದಾರೆ. ಇದು ಕೇವಲ ಆರಂಭ ಮಾತ್ರ, ಅವರ ಯೋಜನೆಯ ಪ್ರಕಾರ ದಿನ ಬಳಕೆಯ ವಸ್ತುಗಳಾದ ಉಪ್ಪು, ತೊಗರಿ ಬೇಳೆ, ಈರುಳ್ಳಿ ಹೀಗೆ ಅಡುಗೆ ಮನೆಗೆ ಬೇಕಾದ ಸಾಮಗ್ರಿಯನ್ನೆಲ್ಲಾ ಕೃತಕ ಅಭಾವ ಸೃಷ್ಟಿಸಿ ಹಣ ಮಾಡಿಕೊಳ್ಳುವ ಯೋಜನೆ ಇವರದಾಗಿತ್ತು.

ಉಪ್ಪು ಕೊರತೆ ಎಂದು ಸಾಕಷ್ಟು ಪ್ರಚಾರದ ನಂತರ ನಗರ ಭಾಗಗಳ ಜನ ದೊಡ್ಡ ಪ್ರಮಾಣದಲ್ಲಿ ಉಪ್ಪು ಖರೀದಿ ಮಾಡಿದರು. ಇದರ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ತಿಳಿದು ಬಂದಿದ್ದೇನೆಂದರೆ, ಇದು ಕೃತಕ ಕೊರತೆ ಸೃಷ್ಟಿ ಎಂದು. ಇದಕ್ಕೆ ಕಾರಣರಾದ ಕೆಲ ವ್ಯಾಪಾರಿಗಳನ್ನು ಈಗಾಗಲೇ ಕೆಲವೆಡೆ ವಶಕ್ಕೆ ಪಡೆದಿದ್ದಾರೆ ಪೊಲೀಸರು.ನೋಟು ರದ್ದು ನಿರ್ಧಾರದಿಂದ ಸೃಷ್ಟಿಯಾಗಿರುವ ಜನರ ಆತಂಕವನ್ನೇ ಹಣ ಮಾಡಿಕೊಳ್ಳುವ ಹೀನ ಕೃತ್ಯಕ್ಕೆ ವ್ಯಾಪಾರಿಗಳು ಮುಂದಾಗಿದ್ದು ಬಹಿರಂಗಗೊಂಡಿದ್ದು, ಅವರನ್ನೆಲ್ಲಾ ಪೊಲೀಸರು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache