ಸೇನಾ ಜೀಪಿಗೆ ಕಟ್ಟಲಾಗಿದ್ದ ವ್ಯಕ್ತಿಗೆ 10 ಲಕ್ಷ ಪರಿಹಾರ ಕೊಡಿ: ಜಮ್ಮೂ ಮಾನವ ಹಕ್ಕು ಆಯೋಗ |News Mirchi

ಸೇನಾ ಜೀಪಿಗೆ ಕಟ್ಟಲಾಗಿದ್ದ ವ್ಯಕ್ತಿಗೆ 10 ಲಕ್ಷ ಪರಿಹಾರ ಕೊಡಿ: ಜಮ್ಮೂ ಮಾನವ ಹಕ್ಕು ಆಯೋಗ

ಭಾರತೀಯ ಸೇನೆ ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಸೇನಾ ಜೀಪಿನ ಮುಂಭಾಗಕ್ಕೆ ವ್ಯಕ್ತಿಯೊಬ್ಬನನ್ನು ಕಟ್ಟಿ ಮಾನವ ಗುರಾಣಿಯನ್ನಾಗಿ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ.10 ಲಕ್ಷ ಪರಿಹಾರ ನೀಡುವಂತೆ ಜಮ್ಮು ಕಾಶ್ಮೀರದ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್ಎಚ್ಆರ್ಸಿ) ಅಧ್ಯಕ್ಷ ಜಸ್ಟೀಸ್ ಬಿಲಾಲ್ ನಾಜ್ಕಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ರೂ.10 ಲಕ್ಷ ಪರಿಹಾರವನ್ನು ಸಂತ್ರಸ್ತ ಫಾರೂಖ್ ಅಹಮದ್ ದಾರ್ ಗೆ ನೀಡಬೇಕು ಎಂದು ಎಸ್.ಹೆಚ್.ಆರ್.ಸಿ ಹೇಳಿದೆ. ಆದರೆ ತನ್ನ ಅಧಿಕಾರ ವ್ಯಾಪ್ತಿಗೆ ಬರದ ಕಾರಣ ಸೇನೆಗೆ ನಿರ್ದೇಶನ ನೀಡಲು ಆಯೋಗ ಮುಂದಾಗಿಲ್ಲ.

  • No items.

ಜೀಪಿಗೆ ಯುವಕನನ್ನು ಕಟ್ಟಿದ ಪ್ರಕರಣ: ಸೇನೆ ಹೇಳಿದ್ದೇನು?

ಬುದ್ಗಾಮ್ ನಲ್ಲಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದ ವೇಳೆ ಕಲ್ಲೆಸೆಯುವವರಿಂದ ರಕ್ಷಿಸಿಕೊಳ್ಳಲು ಸೇನಾ ಜೀಪಿನ ಮುಂಭಾಗ ಫಾರೂಖ್ ಅಹಮದ್ ದಾರ್ ಎಂಬಾತನನ್ನು ಕಟ್ಟಿ ಯೋಧರು ಮುಂದುವರೆದಿದ್ದರು. ಈ ಕೃತ್ಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಭಾರತೀಯ ಸೇನೆ ಸೇರಿದಂತೆ ಹಲವರು ಬೆಂಬಲ ಈ ಕ್ರಮ ಕೈಗೊಂಡ ಮೇಜರ್ ರನ್ನು ಹೊಗಳಿದ್ದರು.

ಇಸ್ಲಾಮಿಕ್ಸ್ ಸ್ಟೇಟ್ಸ್ ಉಗ್ರರಿಗೆ ಭಾರೀ ಹಿನ್ನಡೆ, ಕೈತಪ್ಪಿದ ಮೊಸೂಲ್ ನಗರ

Loading...
loading...
error: Content is protected !!