ಪ್ರಧಾನಿ ಭದ್ರತೆಯಲ್ಲಿದ್ದ ಎಸ್ಐ ಆತ್ಮಹತ್ಯೆ – News Mirchi
We are updating the website...

ಪ್ರಧಾನಿ ಭದ್ರತೆಯಲ್ಲಿದ್ದ ಎಸ್ಐ ಆತ್ಮಹತ್ಯೆ

ಹೈದರಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಹೈದರಾಬಾದ್ ಪ್ರವಾಸದ ಹಿನ್ನೆಲೆಯಲ್ಲಿ ಭದ್ರತಾ ಸಿದ್ಧತೆ ನಡೆಸುತ್ತಿದ್ದ ಎಸ್ಐ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಧರ್ ಎಂಬ ಈ ಎಸ್ಐ, ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಜೀವ ಬಿಟ್ಟಿದ್ದಾರೆ.

ಮೆಹದೀಪಟ್ಟಣಂ ನಿಂದ ಶಂಷಾಬಾದ್ ಗೆ ತೆರಳುವ ಪಿವಿ ನರಸಿಂಹರಾವು ಎಕ್ಸ್ ಪ್ರೆಸ್ ವೇ ಮೇಲೆ ಉಪ್ಪರಪಲ್ಲಿ ಸಮೀಪ ಇದ್ದ ಅವರು, ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ.

ಪ್ರಧಾನಿ ಪ್ರವಾಸದ ಹಿನ್ನೆಲೆಯಲ್ಲಿ ಈ ಪ್ರದೇಶವೆಲ್ಲಾ ಬಿಗಿ ಭದ್ರತೆಯಿಂದ ಕೂಡಿದೆ. ಉಪ್ಪರಪಲ್ಲಿ ಪ್ರದೇಶವೂ ಪ್ರಧಾನಿ ವಾಸ್ತವ್ಯ ಹೂಡಿದ್ದ ಪೊಲೀಸ್ ಅಕಾಡೆಮಿಗೆ ತುಂಬಾ ಸಮೀಪವೇ ಇದೆ. ಬೆಳಗ್ಗೆ ಸುಮಾರು 9:30 ಗಂಟೆಗೆ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಪೊಲೀಸರು ಮಾಧ್ಯಮಗಳು ಸೇರಿದಂತೆ ಯಾರಿಗೂ ಅನುಮತಿ ನೀಡುತ್ತಿಲ್ಲ. ಗುಂಡು ಹಾರಿಸಿಕೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಅದಾಗಲೇ ಅವರು ಸಾವನ್ನಪ್ಪಿದ್ದರು.

ಕೌಟುಂಬಿಕ ಕಲಹಗಳೇ ಶ್ರೀಧರ್ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆಯಾದರೂ, ಇನ್ನೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!