ಮುಖ್ಯಮಂತ್ರಿಗಳ ಜನಾಶೀರ್ವಾದ ಯಾತ್ರೆ ಮುಂದೂಡಿಕೆ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜನಾಶೀರ್ವಾದ ಯಾತ್ರೆ ಮುಂದೂಡಲಾಗಿದೆ. ಏಕಪಕ್ಷೀಯವಾಗಿ ಯಾತ್ರೆ ಕೈಗೊಳ್ಳಲು ಮುಂದಾಗಿದ್ದ ಮುಖ್ಯಮಂತ್ರಿಗಳ ನಡೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶರ್ ಅವರಿಗೆ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರಿಗೇ ಅಸಮಾಧಾನವಿತ್ತು.

ಇವಿಎಂ ಬಳಸಿದರೆ, ಕರ್ನಾಟಕ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ

ಇದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಭಿನ್ನಾಭಿಪ್ರಾಯ ತೊರೆದು ಒಟ್ಟಿಗೆ ಹೋಗಬೇಕು ಎಂದು ಬುದ್ದಿ ಹೇಳಿದೆ ಎನ್ನಲಾಗಿದೆ. ಹೀಗಾಗಿ ಜನಾಶೀರ್ವಾದ ಯಾತ್ರೆಯನ್ನು ಮಾರ್ಚ್ ತಿಂಗಳಿಗೆ ಮುಂದೂಡಲಾಗಿದ್ದು, ಡಿಸೆಂಬರ್ 13 ರಿಂದ ಸರ್ಕಾರದ ವಿವಿಧ ಯೋಜನೆ, ಕಾಮಗಾರಿಗಳಿಗೆ ಚಾಲನೆ ನಿಡಲು ಉದ್ದೇಶಿಸಲಾಗಿದೆ.

Get Latest updates on WhatsApp. Send ‘Subscribe’ to 8550851559