60 ಸಾವಿರ ಕೋಟಿಗಾಗಿ ಮಮತಾ ಸರ್ಕಾರದ ವಿರುದ್ಧ ಸುಪ್ರೀಂ ಗೆ ಸಿಕ್ಕಿಂ |News Mirchi

60 ಸಾವಿರ ಕೋಟಿಗಾಗಿ ಮಮತಾ ಸರ್ಕಾರದ ವಿರುದ್ಧ ಸುಪ್ರೀಂ ಗೆ ಸಿಕ್ಕಿಂ

ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಿಕ್ಕಿಂ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಹೊರಟಿದೆ. ಪಶ್ಚಿಮ ಬಂಗಾಳದಲ್ಲಿ ಗೂರ್ಖಾಲ್ಯಾಂಡ್ ಹೋರಾಟದ ಕಾರಣ ತಮ್ಮ ರಾಜ್ಯಕ್ಕೆ 60 ಸಾವಿರ ಕೋಟಿ ಆದಾಯ ನಷ್ಟವಾಗಿದೆ, ಹೀಗಾಗಿ ಪಶ್ಚಿಮ ಬಂಗಾಳ ರಾಜ್ಯ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿರುವುದಾಗ ಸಿಕ್ಕಿಂ ಸರ್ಕಾರ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷಗಳಿಂದ ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯಕ್ಕಾಗಿ ಚಳುವಳಿ ನಡೆಸುತ್ತಿರುವುದು ನಮಗೆ ತಿಳಿದದ್ದೇ.

ಈ ರಾಜ್ಯದ ಪಕ್ಕದಲ್ಲೇ ಸಿಕ್ಕಿಂ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಕಳೆದ 32 ವರ್ಷಗಳಿಂದ ಚಳುವಳಿ ನಡೆಯುತ್ತಿದೆ. ಅದು ನಡೆಯುವ ಪ್ರತಿ ಬಾರಿಯೂ ಸರ್ಕಾರಿ ಸ್ವತ್ತುಗಳು ಧ್ವಂಸವಾಗುತ್ತಿವೆ. ಈ ಕಾರಣದಿಂದ ಈ 32 ವರ್ಷಗಳ ಅವಧಿಯಲ್ಲಿ 60 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಈ ವಿಷಯದಲ್ಲಿ ನಮಗೆ ನ್ಯಾಯ ಬೇಕು, ಹೀಗಾಗಿ ಸುಪ್ರೀಂ ಕೋರ್ಟ್ ಗೆ ಹೋಗಬೇಕೆಂದು ತೀರ್ಮಾನಿಸಿದ್ದೇವೆ ಎಂದು ಸಿಕ್ಕಿಂ ಸರ್ಕಾರದ ಮೂಲಗಳು ಹೇಳಿವೆ.

ಬೆಂಗಾಲ್ ಹಿಲ್ಸ್ ಮೂಲಕ ಹಾದು ಹೋಗುವ ಎರಡು ಹೆದ್ದಾರಿಗಳು ಸಿಕ್ಕಿಂ ಸಂಪರ್ಕ ಹೊಂದಿದ್ದು, ಗೋರ್ಖಾಲ್ಯಾಂಡ್ ಗಾಗಿ ನಡೆಯುವ ಹೋರಾಟಗಳಿಂದ 3 ದಶಕಗಳಿಂದ ಪ್ರತಿಭಟನೆ ಮತ್ತು ಹೆದ್ದಾರಿ ಬಂದ್ ಗಳಿಂದಾಗಿ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಮತ್ತು ಪ್ರವಾಸೋದ್ಯಮ ಕುಂಟಿತವಾಗಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಹೇಳಿದ್ದಾರೆ.

ದಶಕಗಳ ಬೇಡಿಕೆಯಾದ ಗೂರ್ಖಾಲ್ಯಾಂಡ್ ಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಇತ್ತೀಚೆಗೆ ಹಿಂಸಾಚಾರ ಭುಗಿಲೆದ್ದಿತ್ತು. ಬಹುಸಂಖ್ಯಾತ ನೇಪಾಳಿ ಮಾತನಾಡುವ ಜನರು ವಾಸಿಸುವ ಡಾರ್ಜಿಲಿಂಗ್ ಶಾಲೆಗಳಲ್ಲಿ ಕೇವಲ ಬಂಗಾಳಿಯನ್ನು ಕಡ್ಡಾಯ ಮಾಡಿದ್ದ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರ ಹಿಂಸಾಚಾರಕ್ಕೆ ಕಾರಣವಾಗಿತ್ತು.

Loading...
loading...
error: Content is protected !!