ಬಾಲಮುರಳಿಕೃಷ್ಣ ಇನ್ನಿಲ್ಲ – News Mirchi

ಬಾಲಮುರಳಿಕೃಷ್ಣ ಇನ್ನಿಲ್ಲ

ಚೆನ್ನೈ: ಹಿರಿಯ ಕರ್ನಾಟಕ ಸಂಗೀತ ವಿದ್ವಾಂಸ ಬಾಲಮುರಳಿಕೃಷ್ಣ ರವರು ಗುರುವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಗಾಯಕ, ಚೆನ್ನೈನಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಪಿಟೀಲು ನುಡಿಸುವುದರಲ್ಲೂ ಅಪಾರ ಅನುಭವವಿದ್ದ ಅವರು ಜನ್ಮಿಸಿದ್ದು ಸಂಗೀತ ಕುಟುಂಬದಲ್ಲಿ. ಬಾಲಮುರಳಿಕೃಷ್ಣ ಅವರ ತಾಯಿ ವೀಣಾ ವಾದಕರಾಗಿದ್ದು, ತಂದೆಯವರು ಕೊಳಲು ನುಡಿಸುವುದರಲ್ಲಿ ಹೆಸರು ಮಾಡಿದ್ದರು.

1991 ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

Loading...

Leave a Reply

Your email address will not be published.