ಬೆಂಗಳೂರು: ಹಳೆ ನೋಟು ಸಾಗಿಸುತ್ತಿದ್ದ ಆರು ಜನರ ಬಂಧನ

ರದ್ದುಗೊಂಡ ನೋಟುಗಳನ್ನು ಸಾಗಿಸುತ್ತಿದ್ದ ವಕೀಲರೊಬ್ಬರು ಮತ್ತು ಇಂಜಿನಿಯರೊಬ್ಬರು ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿರುವ ಮೈಕೋ ಲೇಔಟ್ ಪೊಲೀಸರು, ಸುಮಾರು ರೂ.2.80 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ವಿಜಯ ಬ್ಯಾಂಕ್ ಲೇಔಟ್ ನ ಬಿಬಿಎಂಪಿ ಮೈದಾನದ ಬಳಿ ಆಟೋವನ್ನು ತಡೆದು, ರೂ.2.80 ಮೌಲ್ಯದ ನೋಟು ವಶಪಡಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. [ಉಗ್ರರ ಒಳನುಸುಳುವಿಕೆ ತಡೆದು, 5 ಉಗ್ರರನ್ನು ಕೊಂದ ಸೇನೆ]

ಪೊಲೀಸ್ ಮೂಲಗಳ ಪ್ರಕಾರ, ನಾಲ್ವರು ಆರೋಪಿಗಳು ಅಮಾನ್ಯಗೊಂಡ ನೋಟುಗಳನ್ನು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದು, ಇನ್ನಿಬ್ಬರು ದ್ವಿಚಕ್ರ ವಾಹನದಲ್ಲಿ ಆಟೋವನ್ನು ಹಿಂಬಾಲಿಸುತ್ತಿದ್ದರು. ಎಸ್.ದಿನೇಶ್(30), ಕೆ.ಬಿ.ಮರಿ ರೆಡ್ಡಿ(60), ಕೆ. ಹರೀಶ್ (50), ಎಂ. ಚಂದ್ರ ಶೇಖರ್(60), ದಿನೇಶ್ (40), ಮತ್ತು ಭಾನೋಜಿ (51) ಬಂಧಿತರು.

ನೋಟು ಸಾಗಿಸಲು ಬಳಸಿದ್ದ ಆಟೋ ಮತ್ತು ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಕೋರ್ಟಿನಲ್ಲಿ ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.