6 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿದ ಸುಮಿತ್ರಾ ಮಹಾಜನ್ – News Mirchi

6 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿದ ಸುಮಿತ್ರಾ ಮಹಾಜನ್

ಅಶಿಸ್ತಿನ ವರ್ತನೆ ತೋರಿದ 6 ಕಾಂಗ್ರೆಸ್ ಸಂಸದರನ್ನು 5 ದಿನಗಳ ಕಾಲ ಕಲಾಪದಲ್ಲಿ ಭಾಗವಹಿಸದಂತೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅಮಾನತುಗೊಳಿಸಿದ್ದಾರೆ. ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ಚರ್ಚಿಸಬೇಕು ಎಂದು ಸೋಮವಾರ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಗದ್ದಲವೆಬ್ಬಿಸಿದರು. ಸದನದ ಬಾವಿಗೆ ನುಗ್ಗಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಕೆಲವು ಸದಸ್ಯರು ಕಾಗದಗಳನ್ನು ಹರಿದು ಸ್ಪೀಕರ್ ಸುಮಿತ್ರಾ ಮಹಾಜನ್ ಮೇಲೆ ಎಸೆದರು. ಇದರಿಂದಾಗಿ ಆಕ್ರೋಶಗೊಂಡ ಮಹಾಜನ್, ಆರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದರು. ಕಾಂಗ್ರೆಸ್ ಪಕ್ಷದ ಸಂಸದರಾದ ಗೌರವ್ ಗೊಗೋಯ್, ಕೆ.ಸುರೇಶ್, ಅಧೀರ್ ರಂಜನ್ ಚೌದರಿ, ರಂಜಿತ್ ರಂಜನ್, ಸುಷ್ಮಿತಾ ದೇವ್, ಎಂ.ಕೆ.ರಾಘವನ್ ಅವರು ಅಮಾನತಾದ ಸಂಸದರು.

ನಂತರ ಮಧ್ಯಾಹ್ನ 2:30 ಕ್ಕೆ ಕಲಾಪ ಆರಂಭವಾದರೂ, ಪರಿಸ್ಥಿತಿ ತಿಳಿಯಾಗಲಿಲ್ಲ. ತಮ್ಮ ಪಕ್ಷದ ಸದಸ್ಯರನ್ನು ಅಮಾನತು ಮಾಡಿದ ಸ್ಪೀಕರ್ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗಿಳಿದರು. ಕಲಾಪ ನಡೆಯುವ ಲಕ್ಷಣಗಳು ಕಾಣಸದಿದ್ದರಿಂದ ಮಂಗಳವಾರಕ್ಕೆ ಕಲಾಪವನ್ನು ಮುಂದೂಡಲಾಯಿತು.

Contact for any Electrical Works across Bengaluru

Loading...
error: Content is protected !!