ಗುರ್ಮೀತ್ ಡೇರಾದಲ್ಲಿ ಅಸ್ಥಿಪಂಜರಗಳು, ಹೊರಬರುತ್ತಿವೆ ಶಾಕಿಂಗ್ ಸತ್ಯಗಳು |News Mirchi

ಗುರ್ಮೀತ್ ಡೇರಾದಲ್ಲಿ ಅಸ್ಥಿಪಂಜರಗಳು, ಹೊರಬರುತ್ತಿವೆ ಶಾಕಿಂಗ್ ಸತ್ಯಗಳು

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ನಡೆಸುತ್ತಿರುವ ಡೇರಾ ಆಶ್ರಮಗಳಿಗೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿಗಳು ಹೊರಬರುತ್ತಿವೆ. ಸಿರ್ಸಾದಲ್ಲಿರುವ ಡೇರಾದಲ್ಲಿ ಅಸ್ತಿಪಂಜರಗಳು ಸಿಕ್ಕಿರುವುದು ವಿವಾದಕ್ಕೀಡಾಗಿದ್ದು, ಈ ಕುರಿತು ಡೇರಾ ಅಧಿಕೃತ ವಕ್ತಾರೆ ವಿಪಾಸನಾ ಇನ್ಸಾನ್ ಪ್ರತಿಕ್ರಿಯಿಸಿದ್ದಾರೆ.

ಗುರ್ಮೀತ್ ಜೊತೆ ವಿಪಾಸನಾ

ತಾವು ಗುರ್ಮೀತ್ ಸ್ಥಾಪಿಸಿದ ನಿಯಮಗಳನ್ನು ಎಂದೂ ಉಲ್ಲಂಘಿಸಿಲ್ಲ, ಅವರ ನಿಯಮಗಳ ಪ್ರಕಾರವೇ ಕೆಲವರು ನೇರವಾಗಿ ಇಲ್ಲಿಗೆ ಬಂದು ತಮ್ಮ ನಿಧನಾನಂತರ ಇಲ್ಲೇ ಹೂಳಬೇಕು ಎಂದು ಸ್ವಯಂಪ್ರೇರಿತವಾಗಿ ಕೋರಿದ್ದಾಗಿ ಡೇರಾ ಸುದ್ಧಿ ಮಾಧ್ಯಮ “ಸಚ್ ಕಹೂ” ಮೂಲಕ ಬಹಿರಂಗಪಡಿಸಿದ್ದಾರೆ. ಕೆಲವರು ತಮ್ಮ ಕುಟುಂಬ ಸದಸ್ಯರ ಮೃತದೇಹಗಳನ್ನು ತಮಗೆ ನೀಡಿದ್ದು ಅವುಗಳನ್ನು ನದಿಗಳು ಮಲಿನವಾಗುತ್ತದೆ ಎಂಬ ಕಾರಣಕ್ಕಾಗಿ ವಿಷರ್ಜಿಸದೆ ಡೇರಾದಲ್ಲಿ ಹೂತಿದ್ದೇವೆ. ಅವುಗಳ ಮೇಲೆ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಸ್ಥಳೀಯರು ಹೇಳುವುದೇ ಬೇರೆ. ಡೇರಾ ಆಶ್ರಮದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಪ್ರಶ್ನಿಸಿದವರು ಗುರ್ಮೀತ್ ಅನುಯಾಯಿಗಳಾದರೂ ಸರಿ, ಅವರನ್ನು ಹತ್ಯೆ ಮಾಡಿ ಅಥವಾ ಸಜೀವವಾಗಿ 600 ಎಕರೆ, 100 ಎಕರೆ ವಿಸ್ತಾರವಾಗಿರುವ ಯಾವುದಾದರೂ ಡೇರಾದಲ್ಲಿ ಹೂತುಬಿಡುತ್ತಿದ್ದರು ಎಂದು ಕೆಲ ಸ್ಥಳೀಯರು ಆರೋಪಿಸುತ್ತಿದ್ದಾರೆ. ಗುರ್ಮೀತ್ ಬೆಂಬಲಿಗರ ಎದುರು ವಾದಿಸಿದವರು ಯಾರೇ ಆಗಲಿ ಅವರಿಗೂ ಇದೇ ಪರಿಸ್ಥಿತಿ ಬರುತ್ತದೆ ಎಂಬ ಹೆದರಿಕೆಯಿಂದ ಯಾರೂ ಬಾಯಿ ಬಿಡುತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ.

ಚಂಡೀಗಢ ಹೈಕೋರ್ಟ್ ಹರಿಯಾಣ ಸರ್ಕಾರವನ್ನು ಡೇರಾ ಶುದ್ಧೀಕರಣಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ವಿಪಾಸನಾ, ಕಾನೂನುಗಳನ್ನು ಡೇರಾ ಯಾವತ್ತೂ ಉಲ್ಲಂಘಿಸಿಲ್ಲ. ಡೇರಾದಲ್ಲಿ ಶೋಧ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರ್ಮೀತ್ ಅನುಯಾಯಿಗಳು, ಬೆಂಬಲಿಗರು ಯಾವುದೇ ಅಹಿತಕರ ಕೃತ್ಯಗಳಿಗೆ ಇಳಿಯಬಾರದು ಎಂದು ಅನುಯಾಯಿಗಳಿಗೆ ಸೂಚಿಸಿದ್ದಾರೆ.

ಡೇರಾದಲ್ಲಿ ಶೋಧ ಮಾಡಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ ಎಂದು ಡೇರಾ ಅಧಿಕೃತ ವಕ್ತಾರೆ ವಿಪಾಸನಾ ಹೇಳಿದ್ದಾರೆ. ಮತ್ತೊಂದು ಕಡೆ ಗುರುವಾರ ರಾತ್ರಿ ಸಿರ್ಸಾಗೆ ತಲುಪಿದ ಅರೆಸೇನಾಪಡೆ, ಸೈನಿಕರ ತಂಡ, ನಾಲ್ಕು ಜಿಲ್ಲೆಗಳ ಪೊಲೀಸರು ಶುಕ್ರವಾರ ಬೆಳಿಗ್ಗೆಯಿಂದ ಗುರ್ಮೀತ್ ನಡೆಸುತ್ತಿದ್ದ ಡೇರಾಗಳನ್ನು ಅಣುವಣುವೂ ಬಿಡದೆ ಶೋಧಿಸುತ್ತಿದ್ದಾರೆ. ಡೇರಾ ತುಂಬಾ ವಿಶಾಲವಾದ ಪ್ರದೇಶವಾದ್ದರಿಂದ ಶೋಧ ಕಾರ್ಯಚರಣೆ ಮುಗಿಯಲು ಸಮಯ ಹಿಡಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶೋಧ ಕಾರ್ಯ ಮುಂದುವರೆದಂತೆ ಇನ್ನೂ ಏನೇನು ಶಾಕಿಂಗ್ ಸುದ್ದಿಗಳು ಹೊರಬೀಳುವುದೋ ಕಾದು ನೋಡಬೇಕಿದೆ.

Loading...
loading...
error: Content is protected !!