ಉಗ್ರರಿಗೆ ಬಹುಮಾನ ಘೋಷಿಸಿದ್ದ ಬಿ‌ಎಸ್‌ಪಿ ನಾಯಕನ ಕಸಾಯಿಖಾನೆಗೆ ಬೀಗ – News Mirchi

ಉಗ್ರರಿಗೆ ಬಹುಮಾನ ಘೋಷಿಸಿದ್ದ ಬಿ‌ಎಸ್‌ಪಿ ನಾಯಕನ ಕಸಾಯಿಖಾನೆಗೆ ಬೀಗ

ಲಕ್ನೋ: ಈ ಹಿಂದೆ ಪ್ಯಾರಿಸ್ ನ ಚಾರ್ಲಿ ಹೆಬ್ಡೋ ಕಛೇರಿ ಮೇಲಿನ ಉಗ್ರರ ದಾಳಿಯನ್ನು ಸಮರ್ಥಿಸಿಕೊಂಡು, ದಾಳಿ ನಡೆಸಿದವರಿಗೆ ರೂ.56 ಕೋಟಿ ಬಹುಮಾನ ಘೋಷಿಸಿದ್ದ ಬಿಎಸ್‌ಪಿ ನಾಯಕನ ಕಸಾಯಿಖಾನೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಬೀಗ ಜಡಿದಿದೆ.

ಬಿಎಸ್ಪಿ ನಾಯಕ ಯಾಕೂಬ್ ಖುರೇಶಿ ಮತ್ತು ಮಾಜಿ ಮೀರತ್ ಸಂಸದ ಹಾಗೂ ಮಾಜಿ ಬಿ.ಎಸ್.ಪಿ ನಾಯಕ ಶಾಹಿದ್ ಅಖ್ಲಾಕ್ ರವರಿಗೆ ಸೇರಿದ ಎರಡು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲಾಗಿದೆ.

ತಮ್ನನ್ನು ಆದಿತ್ಯನಾಥ್ ಸರ್ಕಾರ ಅನಗತ್ಯವಾಗಿ ಗುರಿಯಾಗಿಸಿಕೊಂಡಿದೆ. ಕಸಾಯಿಖಾನೆಗಳನ್ನು ನಡೆಸಲು ಕಾನೂನು ಪ್ರಕಾರ ಎಲ್ಲಾ ದಾಖಲೆಗಳನ್ನು ಹೊಂದಿದ್ದೇವೆ. ಕಸಾಯಿಖಾನೆಗಳನ್ನು ಮುಚ್ಚಿದ್ದು ಅಲ್ಪಸಂಖ್ಯಾತ ವಿರೋಧಿ ಕ್ರಮ ಎಂದು ಖುರೇಶಿ ಮತ್ತು ಅಖ್ಲಾಕ್ ಆರೋಪಿಸಿದ್ದಾರೆ.

ಚುನಾವಣಾ ಸಮಯದಲ್ಲಿ ವಚನ ಕೊಟ್ಟಂತೆ ಕಸಾಯಿಖಾನೆಗಳನ್ನು ಮುಚ್ಚಲು ಕ್ರಿಯಾ ಯೋಜನೆ ರೂಪಿಸುವಂತೆ ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು. ಘಾಜಿಯಾಬಾದ್ ಜಿಲ್ಲಾಡಳಿತ ಮಂಗಳವಾರ ನಗರದ 15 ಕಸಾಯಿಖಾನೆಗಳನ್ನು ಮುಚ್ಚಿತ್ತು.

Loading...

Leave a Reply

Your email address will not be published.