ಇದರಿಂದಲೇ ಆತ್ಮಹತ್ಯೆ ಯೋಚನೆಗಳು ಬರುತ್ತವಂತೆ… – News Mirchi

ಇದರಿಂದಲೇ ಆತ್ಮಹತ್ಯೆ ಯೋಚನೆಗಳು ಬರುತ್ತವಂತೆ…

ವಾಷಿಂಗ್ಟನ್: ನಿದ್ದೆ ಕಡಿಮೆಯಾದರೆ ಆತ್ಮಹತ್ಯೆ ಯೋಚನೆಗಳು ಹೆಚ್ಚಾಗಿ ಬರುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ ಮಿಚಿಗಾನ್ ಯೂನಿವರ್ಸಿಟಿ ಸಂಶೋಧಕರು. ಸಾಮಾನ್ಯ ರೋಗಗಳಿಂದ ಬಳಲುತ್ತಿರುವವರಿಗಿಂತಲೂ ಮೆದುಳು ಸಂಬಂಧಿ ರೋಗಗಳಿಂದ ಬಳಲುತ್ತಿರುವವರಲ್ಲಿ ಆತ್ಮಹತ್ಯೆ ಯೋಚನೆಗಳು ಹೆಚ್ಚಾಗಿರುತ್ತವೆ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆಯಂತೆ. ಸುಮಾರು ಮೂರು ಲಕ್ಷ ಜನರ ಮೇಲೆ 13 ವರ್ಷಗಳ ದೀರ್ಘಕಾಲ ಸಂಶೋಧನೆ ನಡೆಸಲಾಗಿದೆ.

ಈ ಅವಧಿಯಲ್ಲಿ ಸುಮಾರು ಮೂರು ಸಾವಿರ ಜನ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು. ಇವರಲ್ಲಿ ಶೇ.19 ರಷ್ಟು ಮಾತ್ರ ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡವರು. ಶೇ.20 ರಷ್ಟು ಜನರು ಮಾನಸಿಕ ಖಾಯಿಲೆಗಳ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನು ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ನಿದ್ದೆಯಿಲ್ಲದ ಕಾರಣದಿಂದ ಒತ್ತಡ, ಆತಂಕ, ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆ ಆಲೋಚನೆಗಳು ಬರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Contact for any Electrical Works across Bengaluru

Loading...
error: Content is protected !!