ಮೋದಿ ನಾಯಕತ್ವದಲ್ಲಿ ಭವ್ಯ ಭಾರತ ಉದಯಿಸುತ್ತಿದೆ : ಎಸ್.ಎಂ.ಕೃಷ್ಣ

ನವದೆಹಲಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ(84) ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಕಳೆದ ವಾರವೇ ಕೃಷ್ಣ ಬಿಜೆಪಿ ಸೇರಬೇಕಿತ್ತಾದರೂ, ಅವರ ಸಹೋದರಿಯ ನಿಧನದ ಸುದ್ದಿ ಕೇಳಿ ಸೇರ್ಪಡೆ ಕಾರ್ಯಕ್ರಮವನ್ನು ಮುಂದೂಡಿ ನವದೆಹಲಿಯಿಂದ ಬೆಂಗಳೂರಿಗೆ ವಾಪಸಾಗಿದ್ದರು.

ನನ್ನ ಪ್ರಯಾಣದಲ್ಲಿ ದೇಶ ಸೇವೆಯ ಪ್ರಮುಖ ನಿಲ್ದಾಣದಲ್ಲಿ ಬಂದಿಳಿದಿದ್ದೇನೆ. ಮೋದಿಯವರ ನಾಯಕತ್ವದಲ್ಲಿ ಭವ್ಯ ಭಾರತ ಉದಯಿಸುತ್ತಿದೆ. ದೇಶಕ್ಕೆ ಅಪಾರ ಕೊಡುಗೆ ನೀಡಿದ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ತುಂಬಾ ಖುಷಿಯಾಗಿದೆ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಎಸ್.ಎಂ.ಕೃಷ್ಣ ರವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಅಪಾರವಾದ ಅನುಭವ ಹೊಂದಿರುವ ಎಸ್.ಎಂ.ಕೃಷ್ಣ ದೇಶದ ಆಸ್ತಿ ಎಂದು ಬಣ್ಣಿಸಿದರು.

Loading...

Leave a Reply

Your email address will not be published.

error: Content is protected !!