ಕಾಂಗ್ರೆಸ್ ನಿಂದ ಹೊರನಡೆದ ಕೃಷ್ಣ |News Mirchi

ಕಾಂಗ್ರೆಸ್ ನಿಂದ ಹೊರನಡೆದ ಕೃಷ್ಣ

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ.ಕೃಷ್ಣ ಪಕ್ಷ ತೊರೆಯುತ್ತಿರುವುದಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ವಯಸ್ಸಿನ ನೆಪವೊಡ್ಡಿ ತಮ್ಮನ್ನು ದೂರವಿಟ್ಟ ಪಕ್ಷದ ನಾಯಕರ ವರ್ತನೆಯಿಂದ ತೀವ್ರ ಬೇಸರಗೊಂಡಿದ್ದು ಅವರ ಮಾತಿನಲ್ಲಿ ಕಾಣಿಸುತ್ತಿತ್ತು.

ಪತ್ರಿಕಾಗೋಷ್ಟಿಗೂ ಮುನ್ನ ಕೇಂದ್ರ ಕಾಂಗ್ರೆಸ್ ಮುಖಂಡ ಗುಲಾಂ ನಬೀ ಆಜಾದ್ ಕರೆ ಮಾಡಿ, ಪಕ್ಷದಲ್ಲಿ ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳಲಾಗುವುದು ಎಂಬ ಭರವಸೆಗೂ ಬಗ್ಗದ ಕೃಷ್ಣ, ಕಾಂಗ್ರೆಸ್ ನಿಂದ ಹೊರನಡೆಯುತ್ತಿರುವ ತಮ್ಮ ನಿರ್ಧಾರಕ್ಕೆ ತಾವು ಬದ್ಧ ಎಂದು ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು.

  • No items.

ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ಆಡಳಿತಾವಧಿಯ ಕ್ಷಣಗಳನ್ನು ನೆನಪಿಸಿಕೊಂಡ ಎಸ್.ಎಂ.ಕೃಷ್ಣ, ಆ ಇಬ್ಬರೂ ನಾಯಕರು ತಮ್ಮನ್ನು ನಡೆಸಿಕೊಂಡ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ತಾವು ವಿದೇಶಾಂಗ ಸಚಿವರಾಗಿದ್ದಾಗಿ ಹುದ್ದೆಯಿಂದ ತೆಗೆದು ಹಾಕಿದ್ದ ಬಗ್ಗೆ ನೆನಪಿಸಿಕೊಂಡ ಅವರು, ವಯಸ್ಸಿನ ಕಾರಣಕ್ಕೆ ರಾಜಕಾರಣದಿಂದ ದೂರವಿಡುವುದು ಸರಿಯಲ್ಲ, 45 ವರ್ಷದವರು ವಯಸ್ಸಾದವರಂತೆ ಇರುವುದು, 80 ವರ್ಷದವರು ಪಾದರಸದಂತೆ ಚುರುಕಾಗಿರುವುದು ಕಾಣುತ್ತೇವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಎಲ್ಲೂ ತಮ್ಮ ಮುಂದಿನ ನಡೆ ಏನೆಂಬುದನ್ನು ಎಸ್.ಎಂ.ಕೃಷ್ಣ ಹೇಳಲಿಲ್ಲ.

Loading...
loading...
error: Content is protected !!