ಭಾರತದಂತಹ ಬಡ ದೇಶಗಳಿಗೆ ಸ್ನ್ಯಾಪ್ ಚಾಟ್ ಬೇಡ ಎಂದಿದ್ದ ಸಿಇಒ?

ಭಾರತದಂತಹ ಬಡ ದೇಶಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಆಸಕ್ತಿ ಇಲ್ಲ ಎಂದು ಈವನ್ ಸ್ಪೀಗೆಲ್ ಹೇಳಿದ್ದರು ಎಂಬುದನ್ನು ಮಾಜಿ ಉದ್ಯೋಗಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ಸ್ನ್ಯಾಪ್ ಚಾಟ್ ನ ಮಾಜಿ ಉದ್ಯೋಗಿಯ ಮಾತನ್ನು ಉಲ್ಲೇಖಿಸಿ ಅಮೆರಿಕದ ವೆಬ್ಸೈಟ್ ಒಂದು ವರದಿ ಮಾಡಿದೆ. 2015 ರಲ್ಲಿ ನಡೆದ ಸಭೆಯಲ್ಲಿ ಭಾರತ ಮತ್ತು ಸ್ಪೇನ್ ನಂತಹ ಬಡ ದೇಶಗಳಲ್ಲಿ ವ್ಯಾಪಾರ ವಿಸ್ತರಿಸಲು ಆಸಕ್ತಿಯಿಲ್ಲ. ಸ್ನ್ಯಾಪ್ ಚಾಟ್ ಮೆಸೇಜಿಂಗ್ ಕೇವಲ ಶ್ರೀಮಂತರಿಗೆ ಮಾತ್ರ, ಬಡದೇಶಗಳಲ್ಲಿ ಇದನ್ನು ವಿಸ್ತರಿಸಲು ಇಷ್ಟವಿಲ್ಲ ಎಂದು ಸ್ಪೀಗೆಲ್ ಹೇಳಿದ್ದಾಗಿ ವರದಿ ಮಾಡಿದೆ. ಆದರೆ ಈ ಆರೋಪಗಳನ್ನು ಸ್ನ್ಯಾಪ್ ಚಾಟ್ ಸಂಸ್ಥೆ ಅಲ್ಲಗೆಳೆದಿದೆ. [ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಗೆದ್ದಾಗಲೇ ಬಿಜೆಪಿಯ ಸುವರ್ಣಯುಗ : ಅಮಿತ್ ಶಾ ]

ಬಡ ದೇಶವೆಂಬ ಕಾರಣಕ್ಕೆ ತಮ್ಮ ಉದ್ಯಮವನ್ನು ಭಾರತಕ್ಕೆ ವಿಸ್ತರಿಸಲು ಸ್ನ್ಯಾಪ್ ಚಾಟ್ ಹಿಂದೇಟು ಹಾಕಿದ್ದ ಸಮಯದಲ್ಲೇ, ಗೂಗಲ್, , ಅಮೆಜಾನ್, ಮತ್ತು ಟೆಸ್ಲಾ ನಂತಹ ದೈತ್ಯ ಕಂಪನಿಗಳು ಭಾರತದಲ್ಲಿ ತಮ್ಮ ಆದಾಯ ಹೆಚ್ಚಳಕ್ಕೆ ಭಾರತದಲ್ಲಿ ಆಫ್ ಲೈನ್ ಆಪ್ ಗಳು ಸೇರಿದಂತೆ ಹೊಸ ಹೊಸ ಸೇವೆಗಳನ್ನು ಆರಂಭಿಸಲು ತಯಾರಿ ನಡೆಸಿದ್ದು ಗಮನಾರ್ಹ.

ಭಾರತ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆಯಲ್ಲದೇ, ಮಾರುಕಟ್ಟೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಅಗ್ಗದ ದರದಲ್ಲಿ ಡಾಟಾ ಸೇವೆ ನೀಡಲು ಆರಂಭಿಸಿದ ನಂತರ, ಇತರೆ ಕಂಪನಿಗಳೂ ಅನ್ಯಮಾರ್ಗವಿಲ್ಲದೆ ಡಾಟಾ ದರಗಳನ್ನು ಕಡಿಮೆ ಮಾಡಲೇಬೇಕಾಯಿತು. ಇದರ ಪರಿಣಾಮ ಭಾರತದಲ್ಲಿ ಬಳಸುವವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಕಂಡಿದೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache