ಪಾಕ್ ದಾಳಿಗೆ ಮತ್ತೊಬ್ಬ ಯೋಧ ರಾಜ್ ಸಿಂಗ್ ಹುತಾತ್ಮ – News Mirchi
We are updating the website...

ಪಾಕ್ ದಾಳಿಗೆ ಮತ್ತೊಬ್ಬ ಯೋಧ ರಾಜ್ ಸಿಂಗ್ ಹುತಾತ್ಮ

ಜಮ್ಮೂ: ಜಮ್ಮೂ ಕಾಶ್ಮೀರ ದಲ್ಲಿ ಸೋಮವಾರ ಮುಂಜಾನೆ ಪಾಕಿಸ್ತಾನ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಒಬ್ಬ ಭಾರತೀಯ ಯೋಧ ಹುತಾತ್ಮನಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಬಿಎಸ್‌ಎಫ್ ನ ಹೆಡ್ ಕಾನ್ಸ್‌ಟೇಬಲ್ ರಾಜ್ ಸಿಂಗ್ ಪಾಕ್ ಗುಂಡಿಗೆ ಬಲಿಯಾಗಿರುವವರು. ರಾಜೋರಿ ಪ್ರಾಂತ್ಯದಲ್ಲಿ ದಾಳಿಗೆ ಮುಂದಾದ ಪಾಕ್ ಭದ್ರತಾ ಪಡೆಗಳು ಪ್ರಬಲ ಮೊರ್ಟಾರ್ ಗಳಿಂದ ದಾಳಿ ನಡೆಸಿದ್ದರು.

ಕಳೆದ 24 ಗಂಟೆಗಳಲ್ಲಿ ಗಡಿಯಲ್ಲಿ ಪಾಕ್ ಮೂರು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ದಾಳಿಗೆ ಭಾರತೀಯ ಯೋಧರೂ ಕೂಡಾ ಸೂಕ್ತ ರೀತಿಯಲ್ಲಿ ಪ್ರತಿದಾಳಿ ನಡೆಸುತ್ತಿದ್ದಾರೆ ಎಂದು ಇಂಡಿಯನ್ ಆರ್ಮಿ ಟ್ವಿಟರ್ ಮೂಲಕ ಹೇಳಿದೆ. ಸೆಪ್ಟೆಂಬರ್ ನಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಯ ನಂತರ ಇಲ್ಲಿಯವರೆಗೂ ನಿಯಂತ್ರಣ ರೇಖೆ, ಅಂತರಾಷ್ಟ್ರೀಯ ಗಡಿಗಳಲ್ಲಿ 286 ಬಾರಿ ಪಾಕ್ ಕದನ ವಿರಾಮ ಉಲ್ಲಂಘಿಸಿದೆ. ಈ ದಾಳಿಗಳಲ್ಲಿ 26 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ 14 ಜನರು ಯೋಧರು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!