ಪಾಕ್ ದಾಳಿಯಲ್ಲಿ ಯೋಧ ಗುರುಸೇವಕ್ ಸಿಂಗ್ ಹುತಾತ್ಮ

ಜಮ್ಮು: ನಿಯಂತ್ರಣ ರೇಖೆಯ ಬಳಿ ಇಂದು ಪಾಕಿಸ್ತಾನ ನಡೆಸಿದ ಅಪ್ರಚೋಧಿತ ದಾಳಿಗೆ ಒಬ್ಬ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ. ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟಾರ್ ನಲ್ಲಿ ಪಾಕ್ ಸೇನೆ ನಾಗರೀಕರನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ಆರಂಭಿಸಿತ್ತು. ಜಿಲ್ಲೆಯ ಬಲ್ನೋಯ್ ಪ್ರದೇಶದಲ್ಲಿಯೂ ಕದನವಿರಾಮ ಉಲ್ಲಂಘನೆ ಮುಂದುವರೆದಿದೆ ಎನ್ನಲಾಗಿದೆ.

ಹುತಾತ್ಮ ಯೋಧನನ್ನು 22ನೆ ರೆಜಿಮೆಂಟ್ ನ ಗುರುಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆಯೂ ಪಾಕ್ ದಾಳಿಗೆ ಪರಿಣಾಮಕಾರಿಯಾಗಿ ಶೆಲ್ ಮತ್ತು ಗುಂಡಿನ ದಾಳಿಯ ಮೂಲಕ ಪ್ರತ್ಯುತ್ತರ ನೀಡುತ್ತಿದೆ.