ಸೇನಾ ವಾಹನ ತಡೆದ ಜಮ್ಮೂ ಕಾಶ್ಮೀರ ಪೊಲೀಸರ ಮೇಲೆ ಸೈನಿಕರಿಂದ ಹಲ್ಲೆ |News Mirchi

ಸೇನಾ ವಾಹನ ತಡೆದ ಜಮ್ಮೂ ಕಾಶ್ಮೀರ ಪೊಲೀಸರ ಮೇಲೆ ಸೈನಿಕರಿಂದ ಹಲ್ಲೆ

ಶ್ರೀನಗರ: ಸಮವಸ್ತ್ರ ಧರಿಸದ ಸೇನಾ ಸಿಬ್ಬಂದಿಯಿದ್ದ ಖಾಸಗಿ ವಾಹನವನ್ನು ತಡೆದ ಪೊಲೀಸರೊಂದಿಗೆ ಸೇನಾ ಸಿಬ್ಬಂದಿ ಘರ್ಷಣೆಗೆ ಇಳಿದಿದ್ದು, 7 ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಸೆಂಟ್ರಲ್ ಕಾಶ್ಮೀರದ ಗಂಡರ್ಬಲ್ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಅಮರನಾಥ ಯಾತ್ರೆಯಲ್ಲಿ ಕರ್ತವ್ಯಕ್ಕೆ ತೆರಳಿದ್ದ ಸೇನಾ ಸಿಬ್ಬಂದಿ ಸಮವಸ್ತ್ರ ಧರಿಸದೆ ಖಾಸಗಿ ವಾಹನದಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಪೊಲೀಸರು ವಾಹನ ತಡೆದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. 24-ರಾಷ್ಟ್ರೀಯ ರೈಫಲ್ಸ್ ನ ಸೇನಾ ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಷಯವನ್ನು ಚಿನಾರ್ ಕಾರ್ಪ್ಸ್ ನ ಕಾರ್ಪ್ಸ್ ಕಮಾಂಡರ್, ಲೆಪ್ಟಿನೆಂಟ್ ಗವರ್ನರ್ ಜೆ.ಎಸ್ ಸಂಧು ಅವರ ಗಮನಕ್ಕೆ ತರಲಾಗಿದೆ ಎಂದು ಜಮ್ಮೂ ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸೇನೆ, ಸಣ್ಣ ವಾಗ್ವಾದದಿಂದ ಈ ಘಟನೆ ನಡೆದಿದ್ದು, ಪೊಲೀಸರೊಂದಿಗೆ ಈ ವಿಷಯವನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದೆ.

ಗುಜರಾತ್ ಕಾಂಗ್ರೆಸ್ ಗೆ ದೊಡ್ಡ ಹೊಡೆತ, ಮಾಜಿ ಮುಖ್ಯಮಂತ್ರಿ ವಘೇಲಾ ರಾಜೀನಾಮೆ

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ ನಡೆದ ನಂತರ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾತ್ರೆಯ ವಾಹನಗಳು ಅದಾಗಲೇ ಹೊರಟುಹೋಗಿದ್ದು, ಯಾತ್ರೆಯ ಅವಧಿ ಮುಗಿದ ನಂತರ ಯಾವುದೇ ವಾಹನಗಳಿಗೆ ಅನುಮತಿ ನೀಡದಂತೆ ಸೂಚನೆ ಇದೆ ಎಂದು ಪೊಲೀಸರು, ಸೇನಾ ಸಿಬ್ಬಂದಿಯ ವಾಹನವನ್ನು ಹೋಗಲು ಬಿಟ್ಟಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಸೈನಿಕರು 24 ರಾಷ್ಟ್ರೀಯ ರೈಫಲ್ಸ್ ಘಟಕದ ಯೋಧರನ್ನು ಕರೆಸಿಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮತಾಂತರವಾಗು, ಇಲ್ಲದಿದ್ದರೆ ಕೈಕಾಲು ಕತ್ತರಿಸುತ್ತೇವೆ: ಮಲಯಾಳಿ ಲೇಖಕನಿಗೆ ಬೆದರಿಕೆ

ಗುಂಡ್ ಪೊಲೀಸ್ ಠಾಣೆಗೆ ನುಗ್ಗಿದ ಸೈನಿಕರು, ಠಾಣೆಯಲ್ಲಿದ್ದ ದಾಖಲೆಗಳನ್ನು ನಾಶಪಡಿಸಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

Loading...
loading...
error: Content is protected !!