ಭಾರತದ ವಾಣಿಜ್ಯ ಹಡಗನ್ನು ಅಪಹರಿಸಿದ ಸೋಮಾಲಿಯಾ ಕಡಲ್ಗಳ್ಳರು |News Mirchi

ಭಾರತದ ವಾಣಿಜ್ಯ ಹಡಗನ್ನು ಅಪಹರಿಸಿದ ಸೋಮಾಲಿಯಾ ಕಡಲ್ಗಳ್ಳರು

ಭಾರತಕ್ಕೆ ಸೇರಿದ ಅಲ್ ಕೌಸರ್ ಎಂಬ ವಾಣಿಜ್ಯ ಹಡಗನ್ನು ಸೋಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದಾರೆ. ದುಬೈನ ಅಲ್ ಮುಕಾಲಾ ಬಂದರಿಗೆ ಹೊರಟಿದ್ದ 11 ಸಿಬ್ಬಂದಿಯಿದ್ದ ಹಡಗನ್ನು ಕಡಲ್ಗಳ್ಳರು ಏಪ್ರಿಲ್ 1 ರಂದು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಅಪಹರಣಗೊಂಡ ಹಡಗಿನ ಸಿಬ್ಬಂದಿ ಮುಂಬೈಗೆ ಸೇರಿದವರಾಗಿದ್ದಾರೆ.

ಕಿರು ದೋಣಿಯಲ್ಲಿ ನೀರು ಕೇಳಿಕೊಂಡ ಬಂದ ಕಡಲ್ಗಳ್ಳರು ಹಡಗನ್ನು ಹೈಜಾಕ್ ಮಾಡಿದ್ದಾರೆ ಎಂದು ಹಡಗಿನ ಕ್ಯಾಪ್ಟನ್‌ ತನ್ನ ಮಾಲೀಕನಿಗೆ ಹೇಳಿದ್ದು, ದುಬೈನಲ್ಲಿನ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಪಹರಣಗೊಂಡ ಹಡಗಿನ ಸುರಕ್ಷಿತ ಬಿಡುಗಡೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.

  • No items.

Loading...
loading...
error: Content is protected !!