ಮೋದಿ, ಇಂದಿರಾಗೆ ಹೋಲಿಕೆಯಿಲ್ಲ : ಸೋನಿಯಾ

ದೃಢ ಸಂಕಲ್ಪ ವಿಷಯಕ್ಕೆ ಬಂದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮೋದಿಗೆ ಹೋಲಿಕೆಯೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಅಭಿಪ್ರಾಯ ಪಟ್ಟಿದ್ದಾರೆ. ಮೋದಿಗೆ ಸರಿಸಾಟಿಯಾದ ನಾಯಕರು ಕಾಂಗ್ರೆಸ್ ನಲ್ಲಿಲ್ಲ ಎಂಬ ವಾದವನ್ನು ಅವರು ಅಲ್ಲಗೆಳೆದರು.

ಸೋಮವಾರ ಅಲಹಾಬಾದಿನಲ್ಲಿ ನಡೆದ ಇಂದಿರಾಗಾಂಧಿ ಛಾಯಾಚಿತ್ರ ಪ್ರದರ್ಶನ ಸಂದರ್ಭದಲ್ಲಿ ಆಕೆ ಮಾತನಾಡಿದರು.

ರಾಜಕೀಯಕ್ಕೆ ಬರಬೇಕೆಂದುಕೊಂಡಿದ್ದು ತನ್ನ ಮೊದಲ ಕಠಿಣ ತೀರ್ಮಾನ, ಇಂದಿರಾ ಗಾಂಧಿಯ ಸೊಸೆ ಆಗದೇ ಇದ್ದಿದ್ದರೆ ತಾನು ರಾಜಕಾರಣಕ್ಕೆ ಬರುತ್ತಿರಲಿಲ್ಲ ಎಂದರು. ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ನೀಡುವ ವಿಷಯದಲ್ಲಿ ಮಾತನಾಡಲು ಅಥವಾ ತೀರ್ಮಾನ ಕೈಗೊಳ್ಳಲು ತಾವು ಸರಿಯಾದ ವ್ಯಕ್ತಿಯಲ್ಲ ಎಂದರು.

Related News

loading...
error: Content is protected !!