ಮೌಲ್ವೀ... ತಲೆ ಬೋಳಿಸಿದ್ದೇನೆ, 10 ಲಕ್ಷ ತಾ ಎಂದ ಸೋನೂ ನಿಗಮ್ |News Mirchi

ಮೌಲ್ವೀ… ತಲೆ ಬೋಳಿಸಿದ್ದೇನೆ, 10 ಲಕ್ಷ ತಾ ಎಂದ ಸೋನೂ ನಿಗಮ್

ಪ್ರಸಿದ್ಧ ಗಾಯಕ ಸೋನೂ ನಿಗಮ್ ಇತ್ತೀಚೆಗೆ ಟ್ವಿಟರ್ ಮೂಲಕ ವ್ಯಕ್ತಪಡಿಸಿದ್ದ ಭಾವನೆಗಳ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಎರಡು ದಿನಗಳ ಹಿಂದೆ ತಮ್ಮ ಮನೆಯ ಸಮೀಪದ ಮಸೀದಿಯಿಂದ ಬರುವ ಆಝಾನ್ ಕೂಗಿನಿಂದ ನಾನು ಮುಸ್ಲಿಮನಲ್ಲದಿದ್ದರೂ ನಿದ್ದೆಯಿಂದೇಳಬೇಕಾದ ಪರಿಸ್ಥಿತಿ ಬಂದಿದೆ. ಈ ಬಲವಂತದ ಧರ್ಮನಿಷ್ಠೆ ಹೇರಿಕೆಗೆ ಕೊನೆ ಎಂದು? ಎಂದು ಟ್ವೀಟ್ ಮಾಡಿದ್ದರು. ಅರೆ ಸೋನೂ ನಿಗಮ್ ಯಾರ ಮನಸ್ಸನ್ನೂ ನೋಯಿಸುವ ವ್ಯಕ್ತಿ ಅಲ್ಲ ಎಂದು ಅವರಿಗೆ ಹಲವು ಬಾಲಿವುಡ್ ಮಂದಿ ಬೆಂಬಲವನ್ನೂ ಸೂಚಿಸಿದ್ದರು.

ಆದರೆ ಪಶ್ಚಿಮ ಬಂಗಾಳದ ಮೈನಾರಿಟಿ ಯುನೈಟೆಡ್ ಕೌನ್ಸಿಲ್ ನ ಖಾದೇರಿ ಎಂಬ ಮೌಲ್ವೀ ಸೋನೂ ನಿಗಮ್ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಸೋನೂ ನಿಗಮ್ ಗೆ ತಲೆ ಬೋಳಿಸಿ ಕುತ್ತಿಗೆಯಲ್ಲಿ ಕಿತ್ತೋದ ಚಪ್ಪಲಿ ಹಾರ ಹಾಕಿ ಯಾರು ಮೆರವಣಿಗೆ ಮಾಡುತ್ತಾರೋ, ಅವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

  • No items.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನೂ ನಿಗಮ್, ಇಂದು (ಬುಧವಾರ) ಮಧ್ಯಾಹ್ನ 2 ಗಂಟೆಗೆ ನಮ್ಮ ಮನೆಗೆ ಆಲೀಮ್ ಎಂಬ ಕ್ಷೌರಿಕ ಬಂದು ನನಗೆ ತಲೆ ಬೋಳಿಸುತ್ತಾನೆ. ಮೌಲ್ವೀ… ನೀವು ಹತ್ತು ಲಕ್ಷ ಸಿದ್ಧವಾಗಿಟ್ಟುಕೊಳ್ಳಿ. ಮಾಧ್ಯಮಗಳೂ ನಮ್ಮ ಮನೆಗೆ ಬರಬಹುದು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದರು.

ಹೇಳಿದಂತೆಯೇ ಗಾಯಕ ಸೋನೂ, ತಲೆ ಬೋಳಿಸಿಕೊಂಡು ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಾವು ಹೇಳಿದಂತೆ ತಲ ಬೋಳಿಸಿಕೊಂಡಿದ್ದು, 10 ಲಕ್ಷ ತೆಗೆದುಕೊಂಡು ಬರಬೇಕೆಂದು ಮಾಧ್ಯಮಗಳ ಮೂಲಕ ಮೌಲ್ವಿಗೆ ಹೇಳಿದ್ದಾರೆ.

ಆದರೆ ಮೌಲ್ವೀ ಮಾತ್ರ, ಸೋನೂ ನಿಗಮ್ ಕೇವಲ ತಲೆ ಬೋಳಿಸಿಕೊಂಡಿದ್ದಾರೆ. ಇನ್ನೂ ಎರಡು ಕೆಲಸ ಬಾಕಿ ಇದೆ ಚಪ್ಪಲಿ ಹಾರ ಹಾಕ್ಕೊಂಡು ಮೆರವಣಿಗೆ ಮಾಡಬೇಕು. ಹಾಗಾಗಿ ಹತ್ತು ಲಕ್ಷ ಕೊಡೋಲ್ಲ ಎನ್ನುತ್ತಿದ್ದಾರೆ.

Loading...
loading...
error: Content is protected !!