ಗೋಲ್ಡ್ ಬಾಂಡ್ ಮೂಲಕ ರೂ. 6,030 ಕೋಟಿ ಸಂಗ್ರಹ

ಮುಂಬೈ: ಸಾವರಿನ್ ಗೋಲ್ಡ್ ಬಾಂಡ್ ಗಳ ಮೂಲಕ ಇದುವರೆಗೂ ರೂ.6,030 ಕೋಟಿ ಮೌಲ್ಯದ ಹೂಡಿಕೆಯನ್ನು ಸಂಗ್ರಹಿಸಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ) ಪ್ರಕಟಣೆಯೊಂದರಲ್ಲಿ ಹೇಳಿದೆ.

ಜುಲೈ 28 ರಂದು ಜಾರಿ ಮಾಡಿದ ಸಾವರಿನ್ ಗೋಲ್ಡ್ ಬಾಂಡ್ಗಳಿಗೆ ಸಂಬಂಧಿಸಿದಂತೆ ಟ್ರೇಡಿಂಗ್ ಮಂಗಳವಾರದಿಂದ ಸ್ಟಾಕ್ ಎಕ್ಸ್ ಚೇಂಜ್ಗಳಲ್ಲಿ ಆರಂಭವಾದ ಸಂದರ್ಭದಲ್ಲಿ ಆರ್.ಬಿ.ಐ ನ ಈ ಪ್ರಕಟಣೆ ಹೊರಬಿದ್ದಿದೆ. 2015 ನವೆಂಬರ್ 5 ರಂದು ಮೊದಲ ಬಾರಿಗೆ ಕೇಂದ್ರ ಗೋಲ್ಡ್ ಬಾಂಡ್ ಸ್ಕೀಮ್ ಆರಂಭಿಸಿತ್ತು. ಫಿಜಿಕಲ್ ಗೋಲ್ಡ್ ಗೆ ಬೇಡಿಕೆ ಕಡಿಮೆ ಮಾಡುವುದಲ್ಲದೆ, ಚಿನ್ನವನ್ನು ಖರೀದಿ ಮಾಡಿದ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಹಣಕಾಸಿನ ಉಳಿತಾಯ ಮಾರ್ಗದ ಕಡೆ ಬದಲಿಸಿ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಾಡುವುದೇ ಈ ಸ್ಕೀಮ್ ನ ಉದ್ದೇಶ.