ಎಸ್.ಪಿ ಶಾಸಕನ ಗನ್ ಮ್ಯಾನ್ ಅಕೌಂಟಿನಲ್ಲಿ 100 ಕೋಟಿ!

ಕಾನ್ಪುರ: ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ಎನ್ನುವವರ ಗನ್ ಮ್ಯಾನ್ ಹಣ ಡ್ರಾ ಮಾಡಲು ಎಟಿಎಂ ಗೆ ಹೋದಾಗ ಖಾತೆಯಲ್ಲಿ 100 ಕೋಟಿ ಜಮೆಯಾಗಿರುವುದು ಕಂಡು ಹೌಹಾರಿದ್ದಾರೆ.

ಖಾತೆಯಲ್ಲಿ ರೂ. 99,99,02,724 ಹಣವಿರುವುದು ನೋಡಿ ದಂಗಾದ ಆತ ಶಾಸಕ ಸೋಲಂಕಿ ಗಮನಕ್ಕೆ ತಂದಿದ್ದಾನೆ. ಶಾಸಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ರವರ ಗಮನಕ್ಕೆ ತಂದಿದ್ದರು. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟರು ಎಸ್.ಬಿ.ಐ ಬ್ಯಾಂಕಿನ ಡೆಪ್ಯೂಟಿ ಜನರಲ್ ಮೆನೇಜರ್ ಗೆ ಮಾಹಿತಿ ನೀಡಿದ್ದರು.

ಇದೀಗ ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು, ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!