ರಷ್ಯಾದ ಬಾಹ್ಯಾಕಾಶ ನೌಕೆ ವಿಫಲ

ಮಾಸ್ಕೋ: ಅಂತರಾಷ್ಟ್ರೀಯ ನಿಲ್ದಾಣಕ್ಕೆ ಇಂಧನ, ಆಹಾರ, ಇತರೆ ಸಾಮಗ್ರಿಯನ್ನು ಪೂರೈಸಲು ರಷ್ಯಾ ಕಳಹಿಸಿದ್ದ ಮಾನವ ರಹಿತ ವಾತಾವರಣದಲ್ಲಿ ಸುಟ್ಟು ಭಸ್ಮವಾಗಿದೆ.

ತಮ್ಮ ಪ್ರಯೋಗ ವಿಫಲವಾಗಿದೆ ಎಂದು ರಷ್ಯಾದ ಸಂಸ್ಥೆ ರಾಸ್‌ಕಾಸ್ಮೋಸ್ ಗುರುವಾರ ಪ್ರಕಟಿಸಿದೆ.

ಪ್ರೋಗ್ರೆಸ್ ಎಂ.ಎಸ್-4 ಎಂಬ ಈ ಸರಕು ಸಾರಿಗೆ ನೌಕೆಯನ್ನು ಹೊತ್ತೊಯ್ಯುತ್ತಿದ್ದ ಸೋಯುಜ್-ಯು , ಉಡಾವಣೆಗೊಂಡ 383 ಸೆಕೆಂಡುಗಳ ನಂತರ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡಿತು. ನಂತರ ವಾತಾವರಣದಲ್ಲಿ ಸುಟ್ಟು ಹೋಯಿತೆಂದು ಸಂಸ್ಥೆ ಹೇಳಿದೆ.

ಕಳೆದ ಏಪ್ರಿಲ್ ನಲ್ಲೂ ರಷ್ಯಾ, ಪ್ರೋಗ್ರೆಸ್ ಸರಕು ಸಾರಿಗೆ ನೌಕೆಯ ಪ್ರಯೋಗ ನಡೆಸಿತ್ತು, ಆದರೆ ಅದೂ ವಿಫಲಗೊಂಡಿತ್ತು.

ರಷ್ಯಾ ಪ್ರತಿವರ್ಷ ಇಂತಹ ಮೂರರಿಂದ ನಾಲ್ಕು ಬಾಹ್ಯಾಕಾಶ ನೌಕೆಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆಹಾರ ಪೂರೈಸಲು ಕಳುಹಿಸುತ್ತದೆ.

ಅಮೆರಿಕದ ನಿವೃತ್ತಗೊಂಡ ನಂತರ, ಗಗನಯಾತ್ರಿಗಳಿಗೆ ಅಂ.ರಾ. ತಲುಪಲು ರಷ್ಯಾದ ಸೋಯುಜ್ ಮಾತ್ರವೇ ಬಳಕೆಯಲ್ಲಿದೆ.

Related News

loading...
error: Content is protected !!