“ದಿ ಸ್ಪಾರ್ಟಾನ್ ಪೋಕರ್” ರವರಿಂದ ಇಂಡಿಯನ್ ಪೋಕರ್ ಚಾಂಪಿಯನ್ಷಿಪ್ ಪ್ರಶಸ್ತಿ ಪ್ರಧಾನ – News Mirchi

“ದಿ ಸ್ಪಾರ್ಟಾನ್ ಪೋಕರ್” ರವರಿಂದ ಇಂಡಿಯನ್ ಪೋಕರ್ ಚಾಂಪಿಯನ್ಷಿಪ್ ಪ್ರಶಸ್ತಿ ಪ್ರಧಾನ

ಬೆಂಗಳೂರು: ಭಾರತದ ಪ್ರಮುಖ ಪೋಕರ್ ಗೇಮಿಂಗ್ ಪೋರ್ಟಲ್ “ದಿ ಸ್ಪಾರ್ಟಾನ್ ಪೋಕರ್” ಆಯೋಜಿಸಿದ್ದ ಮೊದಲ ಇಂಡಿಯಾ ಪೋಕರ್ ಚಾಂಪಿಯನ್ ಶಿಪ್ ನ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ನಡೆದ ಈ ಪೋಕರ್ ಪ್ರಶಸ್ತಿ ಸಮಾರಂಭವು ನಗರದ ಶೆರಟನ್ ಗ್ರ್ಯಾಂಡ್ ನಲ್ಲಿ ನಡೆಯಿತು. ವಿವಿಧ ಪಂದ್ಯಾವಳಿಗಳಲ್ಲಿ ಆಟಗಾರರ ಭಾಗವಹಿಸುವಿಕೆಯ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪೋಕರ್ ಉದ್ಯಮದಲ್ಲಿನ ಶ್ರೇಷ್ಠತೆಯನ್ನು ಗುರುತಿಸಿದ ದಿ ಸ್ಪಾರ್ಟಾನ್ ಪೋಕರ್, ಈ ಸಮಾರಂಭದಲ್ಲಿ 6 ವಿವಿಧ ವಿಭಾಗಗಳಲ್ಲಿ 72 ಪೋಕರ್ ಆಟಗಾರರನ್ನು ಸನ್ಮಾನಿಸಿತು. ಪ್ರಸಿದ್ಧ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮತ್ತು ಜನಪ್ರಿಯ ಹಾಸ್ಯ ಕಲಾವಿದ ನವೀನ್ ರಿಚರ್ಡ್ಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಟ ಇಮ್ರಾನ್ ಹಶ್ಮಿ ಮತ್ತು ಪೋಕರ್ ಉದ್ಯಮದ ಪಾರ್ಟ್ಪಾನ್ ಪೋಕರ್ ನ ನಿರ್ದೇಶಕರು ಈ ಸ್ಪರ್ಧೆಯಲ್ಲಿ ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಿದ ವಿಜೇತರನ್ನು ಸನ್ಮಾನಿಸಿದರು.

ಐಪಿಸಿ ಪ್ರಶಸ್ತಿಗಳ ಮೊದಲ ಆವೃತ್ತಿಯ ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅಮಿನ್ ರೊಝಾನಿ, ಎಂ.ಡಿ. ಮತ್ತು ಸಹ-ಸಂಸ್ಥಾಪಕ ದಿ ಸ್ಪಾರ್ಟಾನ್ ಪೋಕರ್, “ದಿ ಇಂಡಿಯಾ ಪೋಕರ್ ಚಾಂಪಿಯನ್ ಶಿಪ್ ಪ್ರಶಸ್ತಿಗಳು ನಮಗೆ ನಿಜಕ್ಕೂ ಅದ್ಭುತ ಅನುಭವ ನೀಡಿದೆ. ಪೋಕರ್ ಉದ್ಯಮವನ್ನು ಒಟ್ಟಿಗೆ ಮತ್ತು ಒಂದು ಛಾವಣಿಯಡಿಯಲ್ಲಿ ನೋಡಲು ಇದು ಸಹಾಯಕವಾಗಿದೆ.. ಪೋಕರ್ ಆಟಗಾರರ ಅದ್ಭುತ ಪ್ರತಿಭೆ ಮತ್ತು ಕೊಡುಗೆಗಳನ್ನು ಗುರುತಿಸಿ ಸನ್ಮಾನಿಸುವುದು ಐಪಿಸಿ ಪ್ರಶಸ್ತಿಗಳ ಹಿಂದಿನ ಗುರಿ. ಕೌಶಲ್ಯ, ಅಭಿವೃದ್ಧಿಶೀಲ ಮತ್ತು ಮನಸ್ಸನ್ನು ಹರಿತಗೊಳಿಸುವ ಕ್ರೀಡೆಯಾಗಿ ಪ್ರತಿ ವರ್ಷವೂ ಪ್ರಶಸ್ತಿಗಳನ್ನು ಆಯೋಜಿಸುವುದಕ್ಕೆ ನಾವು ಆಶಿಸುತ್ತೇವೆ ಮತ್ತು ಈ ಉದ್ಯಮಕ್ಕೆ ಕೊಡುಗೆ ನೀಡಲು ದೇಶದಾದ್ಯಂತ ಎಲ್ಲಾ ಪೋಕರ್ ಆಟಗಾರರನ್ನು ಪ್ರೋತ್ಸಾಹಿಸುತ್ತೇವೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಅಸೋಸಿಯೇಷನ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಟ ಇಮ್ರಾನ್ ಹಶ್ಮಿ ಅವರು, “ಇಂಡಿಯನ್ ಪೋಕರ್ ಚಾಂಪಿಯನ್ ಶಿಪ್ ಪ್ರಶಸ್ತಿಗಳ ಮೊದಲ ಆವೃತ್ತಿಗೆ ಸಾಕ್ಷಿಯಾಗಿರುವುದು ನಿಜಕ್ಕೂ ನನಗೆ ಸಿಕ್ಕ ಗೌರವ ಎಂದು ಭಾವಿಸಿದ್ದೇನೆ. ಈ ಪ್ರತಿಭಾನ್ವಿತ ಪೋಕರ್ ಆಟಗಾರರಲ್ಲಿ ಮತ್ತು ಅಮಿನ್ ರೋಜನಿ, ಪೀಟರ್ ಅಬ್ರಹಾಂ, ರಾಜೀವ್ ಕಂಜನಿ ಮತ್ತು ಸಮೀರ್ ಈ ಪೋಕರ್ ಆಟಗಾರರ ಶ್ರಮ ಮತ್ತು ಪ್ರತಿಭೆಗಳನ್ನು ಗುರುತಿಸಿ, ಸ್ಪಾರ್ಟಾದ ಪೋಕರ್ ರಾಷ್ಟ್ರದಾದ್ಯಂತ ಈ ಆಟಗಾರರಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.

ದಿ ಸ್ಪಾರ್ಟಾನ್ ಪೋಕರ್ ಡಾಟ್ ಕಾಮ್ (TheSpartanPoker.com) ಪ್ರಮುಖ ಆನ್ಲೈನ್ ಪೋಕರ್ ಗೇಮಿಂಗ್ ವೆಬ್ಸೈಟ್ ಆಗಿದ್ದು, ಭಾರತದಲ್ಲಿ ಗೇಮಿಂಗ್ ಬಗ್ಗೆ ಆಸಕ್ತಿ ಇರುವವರಿಗೆ ವಿಶ್ವದರ್ಜೆಯ ಆನ್ಲೈನ್ ಗೇಮಿಂಗ್ ವೇದಿಕೆಯಾಗಿದೆ. ವಿವಿಧ ಪೋಕರ್ ಗೇಮ್, ಆಫರ್ ಗಳನ್ನು ಹೊಂದಿರುವ “ದಿ ಸ್ಪಾರ್ಟಾನ್ ಡಾಟ್ ಕಾಮ್” 2014 ರಲ್ಲಿ ಪೋಕರ್ ಬಾದ್ಷಾ ಎಂದೇ ಹೆಸರಾಗಿರುವ ಅಮೀನ್ ರೋಜಾನಿಯವರು ಆರಂಭಿಸಿದ್ದು, ಇಂದು ಪೋಕರ್ ಅಭಿಮಾನಿಗಳಿಗೆ ಇದು ಹಾಟ್ ಸ್ಪಾಟ್ ಆಗಿದೆ.

Loading...